ನೂತನ ಶಿಕ್ಷಣ ನೀತಿಯಲ್ಲಿ ಗುರುಕುಲ ಶಿಕ್ಷಣ ಕಲಿಕಾ ವಿಧಾನ : ಬಿ.ಸಿ.ನಾಗೇಶ್ BC Nagesh saaksha tv
ದಕ್ಷಿಣ ಕನ್ನಡ : ಗುರುಕುಲ ಶಿಕ್ಷಣದಲ್ಲಿನ ಆಪ್ತ ಕಲಿಕಾ ವಿಧಾನವನ್ನು ನೂತನ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಜಿಲ್ಲೆ ಪುತ್ತೂರಿನ ವಿವೇಕಾನಂದ ಆಂಗ್ಲ ಶಾಲೆಯ ನೂತನ ಕಟ್ಟಡವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪರೀಕ್ಷೆಯ ಒತ್ತಡವನ್ನು ನಿವಾರಿಸಿ ಸಂತೋಷದ ಕಲಿಕೆಗೆ ಅವಕಾಶ ಒದಗಿಸಲಿದೆ.
ವಿಷಯಗಳ ಆಯ್ಕೆ ಸ್ವಾತಂತ್ರವನ್ನು ವಿದ್ಯಾರ್ಥಿಗಳಿಗೇ ನೀಡಿದ್ದು, ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮೌಲ್ಯ ಮಾಪನಕ್ಕೆ ಬದಲಾಗಿ ಶಾಲಾ ಶಿಕ್ಷಕರೇ ವಿದ್ಯಾರ್ಥಿಗಳ ಕಲಿಕೆಯನ್ನು ಗುರುತಿಸಲು ಅವಕಾಶವಿದೆ.
ಗುರುಕುಲ ಶಿಕ್ಷಣದಲ್ಲಿನ ಆಪ್ತ ಕಲಿಕಾ ವಿಧಾನವನ್ನು ನೂತನ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ಇನ್ನು ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಕಲ್ಲಡ್ಕ ಪ್ರಭಾಕರ್ ಭಟ್, ಮತ್ತಿತರರು ಉಪಸ್ಥಿತರಿದ್ದರು.









