ಗುರುಮಿಠಕಲ್ ಜನರೊಂದಿಗೆ ಅರುಣ್ ಕುಮಾರ್ ದೀಪಾವಳಿ ಆಚರಣೆ
ಪಟಾಕಿಸಿ ಸಿಡಿಸಿ ಸಂಭ್ರಮಿಸಿದ ಗುರುಮಿಠಕಲ್ ನ ವಲಸೆ ಕಾರ್ಮಿಕರ ಮಕ್ಕಳು
ಅರ್ಥಪೂರ್ಣ ದೀಪಾವಳಿ ಆಚರಿಸಿದ್ದಕ್ಕಾಗಿ ಅರುಣ್ ಕುಮಾರ್ ಅವರಿಗೆ ಸನ್ಮಾನ
ಬೆಂಗಳೂರು: ಯಾದಗಿರಿ, ಗುರುಮಿಠಕಲ್ ಭಾಗದ ಜನರು ವಲಸೆ ಕಾರ್ಮಿರಾಗಿ ರಾಜ್ಯದ ನಾನಾ ಭಾಗದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹಬ್ಬಗಳ ಆಚರಣೆಯಿಂದ ಯಾವಾಗಲೂ ಸಾಕಷ್ಟು ಜನ ವಂಚಿತರಾಗುತ್ತಿದ್ರು.ಹೀಗಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು, ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರೋ ವಿಶ್ವ ಮಾನವ ಟ್ರಸ್ಟ್ ನ ಅಧ್ಯಕ್ಷರಾದ ಅರುಣ್ ಕುಮಾರ್ ಕಲ್ಗದ್ದೆಯವರು ಯಾದಗಿರಿ ಹಾಗೂ ಗುರುಮಿಠಕಲ್ ಜನರೊಂದಿಗೆ ದೀಪಾವಳಿ ಆಚರಿಸಿದ್ದಾರೆ

ಬೆಂಗಳೂರಿನ ಕೂಡ್ಲು ಗೇಟ್ ನ ವಿಜಿಪಿ ಲೇಔಟ್ ನಲ್ಲಿ ಯಾದಗಿರಿ,ಗುರುಮಿಠಕಲ್ ಭಾಗದ 40-50 ಕುಟುಂಬ ವಲಸೆ ಕಾರ್ಮಿಕರಾಗಿ ಬಂದು ನೆಲೆಸಿದ್ರು. ಅವ್ರು ಕಟ್ಟಡ ಕೆಲಸಗಾರರಾಗಿ ಕೆಲಸ ಮಾಡುತ್ತಾಅಲ್ಲಿ ನೆಲೆಸಿದ್ರು. ಅಕ್ಕಪಕ್ಕದ ಅಪಾರ್ಟಮೆಂಟ್ ಗಳಲ್ಲಿ ಸಂಭ್ರಮ ಸಡಗರದ ದೀಪಾವಳಿ ನಡೆಯುತ್ತಿತ್ತು.ಆದ್ರೆ ಗುಡಿಸಿಲಿನಲ್ಲಿರೋ ಬಡ ಕುಟುಂಬಕ್ಕೆ ತಮ್ಮ ಊರಿಗೆ ವಾಪಸ್ಸಾಗಿ ದೀಪಾವಳಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಸ್ಥಳೀಯರ ಮೂಲಕ ವಿಚಾರ ತಿಳಿದು ಅರುಣ್ ಕುಮಾರ್ ಕಲ್ಗದ್ದೆ ಅವರು ಯುವಕರ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದೀಪಾವಳಿ ಆಚರಣೆ ನಡೆಸಿದ್ರು.ಮೊದಲಿಗೆ ದೀಪ ಬೆಳಗುದರ ಮೂಲಕ ದೀಪಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.ಹಾಗೇ ಅಲ್ಲಿನ ಮಕ್ಕಳಿಗೆ ಪಟಾಕಿ ಹಂಚಿ,ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.

ದೀಪಾವಳಿ ಸಂಭ್ರಮದ ನಡುವೆ ಪುನೀತ್ ರಾಜ್‍ಕುಮಾರ್ ಗೆ ಹಾಡುಗಳ ಮೂಲಕ ನಮನ ಅಲ್ಲಿನ ಮಕ್ಕಳು ನಮನ ಸಲ್ಲಿಸಿದರು. ಸ್ಥಳದಲ್ಲೇ ಊಟ ತಯಾರಿಸಿ ಅರುಣ್ ಕುಮಾರ್ ಅವರು ಸ್ಥಳೀಯ ನಿವಾಸಿಗಳಿಗೆ ಬಿಡಿಸಿದ್ರು.ಒಟ್ಟಾರೆ ಈ ಭಾರಿ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ದೀಪಾವಳಿಯನ್ನು ವಲಸಿಗರ ಗುಡಿಸಿಲಲ್ಲಿ ಆಚರಿಸಲಾಯ್ತು.ಹೀಗಾಗಿ ಯಾದಗಿರಿ ,ಗುರುಮಿಠಕಲ್ ನ ಸ್ಥಳೀಯ ಮುಖಂಡರಾದ ಸಿದ್ದಣ್ಣ ಮತ್ತು ಮಧು ಅವರು ಸಂತಸದಿಂದ ಅರುಣ್ ಕುಮಾರ್ ಕಲ್ಗದ್ದೆಯವರನ್ನು ಸನ್ಮಾನಿಸಿದ್ರು.









