ಜ್ಞಾನವಾಪಿ ಮಸೀದಿ ಸಮೀಕ್ಷೆ ಪೂರ್ಣ : ಕೊಳದಲ್ಲಿ ಶಿವಲಿಂಗ ಪತ್ತೆ, – ಹಿಂದೂ ಪರ ಪ್ರತ್ಯಕ್ಷದರ್ಶಿ…
ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋ ಸಹಿತ ಮೂರನೇ ದಿನದ ಸಮೀಕ್ಷೆಯು ಇಂದು ಮುಕ್ತಾಯವಾಗಿದೆ. ಮಸೀದಿ ಸಂಕೀರ್ಣದೊಳಗಿನ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ವತಿಯಿಂದ ಸಮೀಕ್ಷಾ ಸಮಿತಿ ತಂಡದ ಸದಸ್ಯರಾಗಿದ್ದ ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.
ಕಾಶಿ ವಿಶ್ವನಾಥ ಧಾಮದ ನಂದಿ ಎತ್ತ ಮುಖ ಮಾಡಿ ನೋಡುತ್ತಿತ್ತೋ ಅದೇ ದಿಕ್ಕಿನಲ್ಲಿ ಶಿವಲಿಂಗ ದೊರೆತಿರುವುದಾಗಿ ಹಿಂದುಪರ ಪ್ರತ್ಯಕ್ಷದರ್ಶಿಗಳು ಮಾಧ್ಯಮದೆದುರು ಹೇಳಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ವಾರಣಾಸಿಯ ಪ್ರಸಿದ್ಧ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸತತ ಮೂರನೇ ದಿನವೂ ಬಿಗಿ ಭದ್ರತೆಯ ನಡುವೆ ಸರ್ವೆ ಕಾರ್ಯ ಪೂರ್ಣಗೊಂಡಿದೆ. ನಾಳೆ ಅಂದರೆ ಮೇ 17ರಂದು ಅಡ್ವೊಕೇಟ್ ಕಮಿಷನರ್ ನ್ಯಾಯಾಲಯಕ್ಕೆ ಸಮೀಕ್ಷಾ ವರದಿಯನ್ನು ಮಂಡಿಸಬೇಕು. ಮೂರು ದಿನಗಳ ಕಾಲ ನಡೆದ ಸಮೀಕ್ಷೆಯಲ್ಲಿ ಏನೆಲ್ಲಾ ಕಂಡು ಬಂತು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಶಿವಲಿಂಗ ಸಿಕ್ಕಿದೆ ಎಂಬ ಹಿಂದುಪರ ಪ್ರತ್ಯಕ್ಷದರ್ಶಿಗಳ ಹೇಳಿಕೆಗೆ ಪುಷ್ಟಿ ನೀಡುವಂತೆ, ನ್ಯಾಯಾಲಯವು ಅದಾಗಲೇ ಆ ಪ್ರದೇಶವನ್ನು ಯಾರೂ ಪ್ರವೇಶಿಸದಂತೆ ಆದೇಶ ನೀಡಿ, ಅಲ್ಲಿನ ಆಧಾರಗಳನ್ನು ಸಂರಕ್ಷಿಸುವಂತೆ ಹೇಳಿದೆ.
ಇಂದು ಮೂವರು ಆಯೋಗದ ಸದಸ್ಯರು, ವರದಿಯನ್ನು ಸಮಯಕ್ಕೆ ಪೂರ್ಣಗೊಳಿಸದಿದ್ದರೆ, ನಾವು ನ್ಯಾಯಾಲಯವನ್ನು ಹೆಚ್ಚು ಸಮಯ ಕೇಳುತ್ತೇವೆ ಎಂದು ಸರ್ಕಾರಿ ವಕೀಲ ಮಹೇಂದ್ರ ಪ್ರಸಾದ್ ಪಾಂಡೆ ತಿಳಿಸಿದರು. ಇಡೀ ಪ್ರಕ್ರಿಯೆಯು ಶಾಂತಿಯುತವಾಗಿದೆ ಎಂದು ಹೇಳಿದರು. ಭಾನುವಾರದವರೆಗೆ ಶೇ 65ರಷ್ಟು ಸಮೀಕ್ಷೆ ಪೂರ್ಣಗೊಂಡಿತ್ತು







