Gyanvapi Case | ಶಿವಲಿಂಗದ ಪರೀಕ್ಷೆ ಮನವಿ ನಿರಾಕರಣೆ
ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ನಕಾರ
ಗ್ಯಾನ್ ವಾಪಿ ಮಸೀದಿಯ ಶಿವಲಿಂಗ ಪರೀಕ್ಷೆ
ಯುಪಿಯ ವಾರಣಾಸಿಯ ಗ್ಯಾನ್ ವಾಪಿ ಮಸೀದಿ
ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಕೋರ್ಟ್ ನಿರಾಕರಣೆ
ಉತ್ತರ ಪ್ರದೇಶ : ವಾರಣಾಸಿಯ ಗ್ಯಾನ್ ವಾಪಿ ಮಸೀದಿಯಲ್ಲಿ ಸಿಕ್ಕಿದೆ ಎನ್ನಲಾಗಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ನ್ಯಾಯಾಲಯ ನಿರಾಕರಿಸಿದೆ.
ಈ ಹಿಂದೆ ವಿಡಿಯೋ ಸಮೀಕ್ಷೆ ವೇಳೆ ಮಸೀದಿಯಲ್ಲಿ ಶಿವಲಿಂಗ ರೀತಿಯ ವಸ್ತು ಸಿಕ್ಕಿದೆ ಎಂದು ಹಿಂದೂ ಪರ ವಕೀಲರು ವಾದಿಸಿದ್ದರು.
ಆದ್ರೆ ಇದು ಶಿವಲಿಂಗವಲ್ಲ, ಮಸೀದಿಯಲ್ಲಿ ಪ್ರಾರ್ಥನೆಗೆ ಮುನ್ನ ಅಂಗಾಂಗ ಶುದ್ಧಿಗೆ ಬಳಸಲಾಗುತ್ತಿದ್ದ ನೀರಿನ ಚಿಲುಮೆ ಎಂದು ಮುಸ್ಲಿಂ ಪರ ವಕೀಲರು ವಾದ ಮಂಡಿಸಿದ್ದರು.

ಇದೀಗ ಈ ಶಿಲೆಯ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ವಾರಣಾಸಿ ಕೋರ್ಟ್ ಅನುಮತಿ ನಿರಾಕರಿಸಿದೆ.
ಈ ಹಿಂದೆ ಗ್ಯಾನ್ ವಾಪಿ ಮಸೀದಿಯ ಹೊರ ಗೋಡೆಯಲ್ಲಿ ಇರುವ ಶೃಂಗಾರ ಗೌರಿ ಮೂರ್ತಿಗಳ ಪೂಜೆಗೆ ಅವಕಾಶ ನೀಡಬೇಕೆಂದು ಐವರು ಹಿಂದೂ ಮಹಿಳೆಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಈ ವೇಳೆ ವಿಡಿಯೋ ಸರ್ವೆ ಸಮೀಕ್ಷೆ ಮಾಡಲಾಗಿತ್ತು.
ಈ ವೇಳೆ ಮಸೀದಿಯ ಬಾವಿಯ ಒಳಗೆ ಶಿವಲಿಂಗದ ರೂಪದ ಶಿಲೆ ಸಿಕ್ಕಿತ್ತು.
ಇದನ್ನ ಹಿಂದೂ ಪರ ವಕೀಲರು ಶಿವಲಿಂಗ ಎಂದು ವಾದಿಸಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಆಗ್ರಹಿಸಿದ್ದರು.







