Gyanvapi mosque-ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ ಪ್ಯರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ನಿರ್ವಾಹಕರಾದ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ (ಎಐಎಂಸಿ) ವಕೀಲರು ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸದಂತೆ ಸ್ಥಳಿಯ ನ್ಯಾಯಲಕ್ಕೆ ಮನವಿ ಸಲ್ಲಿಸಿದ್ದಾರೆ.
ಹಿಂದೂ ಪರ ವಕೀಲರಾದ ಮದನ್ ಮೋಹನ್ ಅವರು ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸುವಂತೆ ತನಿಖೆಯನ್ನು ಕೋರಿದ್ದರು. ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅಕ್ಟೋಬರ್ 7 ರಂದು ವಿಚಾರನೆ ನಡೆಸಿ ಮುಂದಿನ ವಿಚಾರಣೆಯನ್ನ ಅಕ್ಟೋಬರ್ 11ಕ್ಕೆ ನಿಗದಿಪಡಿಸಿದೆ ಮತ್ತು ಅವರ ಬೇಡಿಕೆಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು AIMCಗೆ ನಿರ್ದೇಶಿಸಿದೆ.
AIMC ಅನ್ನು ಪ್ರತಿನಿಧಿಸುವ ವಕೀಲರಲ್ಲಿ ಒಬ್ಬರಾದ ತೌಹಿದ್ ಖಾನ್ ಅವರು ಕಾರ್ಬನ್ ಡೇಟಿಂಗ್ ಅಥವಾ ರಚನೆಯ ಯಾವುದೇ ವೈಜ್ಞಾನಿಕ ತನಿಖೆಯನ್ನು ನಡೆಸದಂತೆ ವಿರೋಧಿಸಿದ್ದಾರೆ. ಇದು ಮಸೀದಿ ಪವಿತ್ರತೆಯನ್ನ ಹಾಳುಮಾಡುತ್ತದೆ ಎಂದು ಹೇಳಿದ್ದಾರೆ. . “ನಾವು ನಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುತ್ತೇವೆ” ಎಂದು ಖಾನ್ ಹೇಳಿದರು.
ಕಾರ್ಬನ್ ಡೇಟಿಂಗ್ ಕೋರಿ ನಾಲ್ವರು ಫಿರ್ಯಾದಿಗಳ ಮನವಿಯನ್ನು ಆಲಿಸಿದ ನ್ಯಾಯಾಲಯ ಸೆಪ್ಟೆಂಬರ್ 29 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇನ್ನೊಬ್ಬ ಫಿರ್ಯಾದಿ ರಾಖಿ ಸಿಂಗ್ ಅವರು ಕಾರ್ಬನ್ ಡೇಟಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು, ಇದು “ಶಿವಲಿಂಗ ವನ್ನ ಧಾರ್ಮಿಕ ಆಚರಣೆಗಳಿಗೆ ಅನರ್ಹಗೊಳಿಸುತ್ತದೆ ಎಂದು ಹೇಳಿದ್ದಾರೆ.
ಜ್ಞಾನ್ವಾಪಿ ಮಸೀದಿಯಲ್ಲಿ ನಮಾಜ್ ಮಾಡುವ ಮೊದಲು ಧಾರ್ಮಿಕ ವಿಧಿವಿಧಾನಗಳನ್ನ ಪೂರೈಸಲು ಬಳಸುವ ಸಣ್ಣ ಕಲ್ಯಾಣಿ ಸಮೀಪದಲ್ಲಿ “ಶಿವಲಿಂಗ” ಕಂಡುಬಂದಿದೆ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದ್ದರು. ಆದರೆ ಮಸೀದಿ ಆಡಳಿತ ಇದು ಕಾರಂಜಿ ಭಾಗವಾಗಿದೆ ಎಂದು ವಾದ ನಡೆಸಿದರು.








