ನಾನು ಬೇಸಿಕಲಿ ಕಾಂಗ್ರೆಸ್ ಮ್ಯಾನ್ : ಹೆಚ್.ಡಿ.ದೇವೇಗೌಡ
ಬೆಂಗಳೂರು : ನಾನು ಬೇಸಿಕಲಿ ಕಾಂಗ್ರೆಸ್ ಮ್ಯಾನ್. ಕೆಲವು ತಿಕ್ಕಾಟದಿಂದ ನನ್ನನ್ನು ಹೊರಹಾಕಿದ್ರು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಇಂದು ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಹೆಚ್ ಡಿ ದೇವೇಗೌಡರು ಮಾತನಾಡಿ, ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದರು.
ನಾನು ಕೂಡ ಮೂಲತಃ ಕಾಂಗ್ರೆಸ್ ಮ್ಯಾನ್, ಕೆಲವು ತಿಕ್ಕಾಟದಿಂದ ನನ್ನನ್ನು ಹೊರಹಾಕಿದ್ರು. ಆ ಸನ್ನಿವೇಶದಲ್ಲಿ ಅದಕ್ಕೆ ನಾನೇ ಕಾರಣ. ಈ ಹಿಂದೆ ನನ್ನನ್ನು ಎಲ್ಲರೂ ಹೊರಹಾಕಿದ್ರು, ಏಕಾಂಕಿಯಾಗಿದ್ದೆ.
ಯಾರ ಹೆಸ್ರನ್ನೂ ಹೇಳೋಕ್ಕಾಗಲ್ಲ. ಮತ್ತೆ ವಾಪಾಸ್ ಎಲ್ಲಾ ನನ್ನ ಹತ್ರಾನೇ ಬಂದ್ರು. ಯಾರಾದ್ರೂ ನಂಗೆ ಹತ್ತು ರೂಪಾಯಿ ಕೊಟ್ಟಿದ್ದಾರಾ? ಈಗ ಕೆಲವರು ಬದುಕಿದ್ದಾರೆ ಅವ್ರಿಗೆ ಹೇಳ್ತಿದ್ದೇನೆ. ಒಬ್ಬ ಕನ್ನಡಿಗ ಪ್ರಧಾನಿ ಆಗೋ ಮಟ್ಟವೂ ಬಂತು.
ಯಾರಿಂದಲೂ ಜೆಡಿಎಸ್ ಅಲುಗಾಡಿಸಲು ಸಾಧ್ಯವಿಲ್ಲ : ಸಿದ್ದುಗೆ ಹೆಚ್ ಡಿಡಿ ಗುದ್ದು
ನಾನು ಪ್ರಧಾನಿ ಆಕಾಂಕ್ಷಿಯಾಗಿರಲಿಲ್ಲ. ಅಪೇಕ್ಷೆಯೂ ಇರಲಿಲ್ಲ, ಅದು ವಿಧಿ. ನಂತರ ನನ್ನ ಬಿಟ್ಟು ಸರ್ಕಾರ ಕೂಡ ಮಾಡಿದ್ರು .ತೆನೆ ಹೊತ್ತ ಮಹಿಳೆ ಬಗ್ಗೆ ಏನೇನೋ ಮಾತಾಡಬಾರದು ಎಂದು ನೇರವಾಗಿ ಸಿದ್ದರಾಮಯ್ಯ ಅವರಿಗೆ ದೇವೇಗೌಡ ಅವರು ತಿರುಗೇಟು ನೀಡಿದರು.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ ಡಿಡಿ, ಕಾಂಗ್ರೆಸ್ ನವರು ಜೆಡಿಎಸ್ ಪಕ್ಷವನ್ನ ಬಿಜೆಪಿಯ ಬಿ ಟೀಂ ಅಂತ ರಾಹುಲ್ ಗಾಂಧಿ ಮೂಲಕ ಹೇಳಿಸಿದ್ರು. ಪ್ರತಿಯೊಂದನ್ನೂ ಕುಮಾರಸ್ವಾಮಿ ತಲೆಗೆ ಕಟ್ಟುತ್ತಿದ್ದರು.
ಈಗ ಇವ್ರು ನನ್ನನ್ನ ಪರೀಕ್ಷೆ ಮಾಡ್ತಿದ್ದಾರೆ. ನನ್ನ ಜಾತ್ಯಾತೀತತೆಯನ್ನ ಪರೀಕ್ಷೆ ಮಾಡ್ತಿದ್ದಾರೆ. ನಾನು ಜೀವನದಲ್ಲಿ ಹೋರಾಟ ಮಾಡಿ ಈ ಹಂತಕ್ಕೆ ಬಂದಿದ್ದೇನೆ. ನನಗೆ ಕಾಂಗ್ರೆಸ್ ನಡವಳಿಕೆ ಏನು ಎಂಬುದು ಗೊತ್ತಿದೆ. ನನ್ನ ಸೆಕ್ಯೂಲರ್ ನ್ನ ಟೆಸ್ಟ್ ಮಾಡಲು ಬರ್ಬೇಡಿ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









