ಕೇಂದ್ರದಲ್ಲಿ ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ರಾಜ್ಯಕ್ಕೆ ಮಾರಕ : ಹೆಚ್ ಡಿಕೆ
ಬೆಂಗಳೂರು : ಕೇಂದ್ರದಲ್ಲಿ ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ರಾಜ್ಯಕ್ಕೆ ಎರಡು ಮಾರಕವಾದ ಪಕ್ಷಗಳೇ. ಮಹದಾಯಿ ಅಥವಾ ಅಪ್ಪರ್ ಕೃಷ್ಣಾ ಯೋಜನೆ ಕುರಿತು ಯಾವುದೇ ಸಕಾರಾತ್ಮಕ ಸ್ಪಂದನೆ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರ ತೆಗೆದ ದಿವಸವೇ ಯಡಿಯೂರಪ್ಪ ಅವರಿಗೆ ಹೇಳಿದ್ದೆ. ನಮ್ಮ ಸರ್ಕಾರ ತೆಗೆದು ಬಂದಿದ್ದೀರಾ, ಗೌರವಯುವವಾಗಿ, ಹೆಸರು ಉಳಿಸಿಕೊಂಡು ಹೋಗಿ ಎಂದು ಹೇಳಿದ್ದೆ. ಕಾಂಗ್ರೆಸ್ ನಾಯಕರ ನಡವಳಿಕೆ ನೋಡಿದಾಗ ಇಂತಹ ಪರಿಸ್ಥಿತಿ ಇವರಿಗೆ ಬರಬಾರದಿತ್ತು. ಇವತ್ತು ಅಧಿಕಾರಕ್ಕೋಸ್ಕರ ಒಂದು ಸಮಾಜದ ಓಲೈಕೆಗೆ ಒಂದು ಗುಂಪು ಅನುಕಂಪ ರೀತಿ ಮಾತನಾಡುವುದು. ಒನ್ನೊಂದು ಗುಂಪು ಭ್ರಷ್ಟಚಾರಿಗಳು ಅಂತ ಹೇಳುವ ನಾಯಕರು ಅಲ್ಲಿದ್ದಾರೆ. ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಕುರಿತು ಸ್ಪಷ್ಟ ಮಾಹಿತಿ ಹೇಳಿದರೆ ಬಿಎಸ್ ವೈ ಅವರಿಗೆ ಅನುಕೂಲ ಆಗಲಿದೆ. ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ರಾಜ್ಯದ ಜನರಿಗೆ ಅನಾನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಮೋದಿ ಭೇಟಿ ಬಂದ ನಂತರ ಬಿಎಸ್ ವೈ ಮಾತಾಡಿದ್ದು ನೀರಾವರಿ ಯೋಜನೆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಅಂತ. ಆದ್ರೆ ಕೇಂದ್ರದ ಜಲ ಸಂಪನ್ಮೂಲ ಸಚಿವರು ಹಾಗೂ ತಮಿಳುನಾಡಿನ ಸಚಿವರು ಹೇಳ್ತಾರೆ ಮೇಕೆದಾಟು ಯೋಜನೆ ಆಗಲ್ಲ ಅಂತ ಪ್ರಧಾನಿಗಳು ಒಪ್ಪಿಗೆ ಕೊಟ್ಟಿಲ್ಲ ಅಂತ ಹೇಳ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ರಾಜ್ಯಕ್ಕೆ ಎರಡು ಮಾರಕವಾದ ಪಕ್ಷಗಳೇ. ಮಹದಾಯಿ ಅಥವಾ ಅಪ್ಪರ್ ಕೃಷ್ಣಾ ಯೋಜನೆ ಕುರಿತು ಯಾವುದೇ ಸಕಾರಾತ್ಮಕ ಸ್ಪಂದನೆ ಇಲ್ಲ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು.
ಇನ್ನು ಅಪ್ಪರ್ ಕೃಷ್ಣಾ ಯೋಜನೆಯಲ್ಲಿ ಯುಕೆಪಿಯ ಮೂರನೇ ಹಂತದ ಕೆಲಸ ಆಗಬೇಕಿದೆ. ಈಗಾಗಲೇ 75000 ಕೋಟಿ ಹಣ ಖರ್ಚು ಮಾಡಿದ್ದೇವೆ. ಇನ್ನೂ 6500 ಕೋಟಿ ಹಣ ಬೇಕು, ಅದು ನೆನಗುದಿಗೆ ಬಿದ್ದಿದೆ. ತಮಿಳುನಾಡಿನಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಹೆಚ್ಚುವರಿ ನೀರನ್ನ ಅನ್ನೋದು ಗೊತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸದ್ಯದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ನಮ್ಮ ಪಕ್ಷದ ಆ ಭಾಗದಲ್ಲಿ ಆರು ಜನ ಶಾಸಕರಿದ್ದಾರೆ. ಬೆಳಗಾವಿ ಭಾಗದ ಮಾಜಿ ಶಾಸಕರ ಜೊತೆಯಲ್ಲಿ 30 ಜನ ಶಾಸಕರೊಟ್ಟಿಗೆ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಿಗಳಿಗೆ ರಾಜ್ಯಪಾಲರ ಮೂಲಕ ಮೆಮೋರಂಡಮ್ ನೀಡುತ್ತೇವೆ. ನಮ್ಮ ಮೂರು ಪ್ರಮುಖ ಬೇಡಿಕೆಗಳಾದ ಮೇಕೆದಾಟು, ಮಹದಾಯಿ, ಯುಕೆಪಿಯ ಯೋಜನೆ ವಿಚಾರದಲ್ಲಿ ಮನವಿ ಮಾಡ್ತೇವೆ. ಇದರ ವಿಚಾರಗಳ ಬಗ್ಗೆ ರೆಪ್ರಸಂಟೇಷನ್ ನೀಡ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಪಕ್ಷ ಸಂಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಹೊಸ ಹುರುಪಿನ ಯುವಕರ ಪಡೆಯೊಂದಿಗೆ ತಂಡ ಕಟ್ಟುತ್ತಿದ್ದೇವೆ. ರಾಜ್ಯದ ಜನತೆಯ ಆಶಿರ್ವಾದದೊಂದಿಗೆ ಹಾಗೂ ಜನಸಾಮಾನ್ಯರ ಮಧ್ಯೆ ಹೋಗಿ ಕೆಲಸ ಮಾಡುವ ಯುವಕರ ತಂಡ ಕಟ್ಟುತ್ತಿದ್ದೇವೆ. ವಲಸೆ ಹೋದ ಯಾವ ಶಾಸಕರನ್ನೂ ಕರೆತರುವ ಅವಶ್ಯಕತೆ ನಮಗಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.









