ಕುಮಾರಸ್ವಾಮಿ ಬಹಳದೊಡ್ಡವರು, ಯಾವಾಗ ಹೋರಾಟ ಮಾಡ್ತಾರೋ ಗೊತ್ತಿಲ್ಲ : ಡಿ.ಕೆ.ಶಿವಕುಮಾರ್
ಹಾಸನ : ಹೆಚ್. ಡಿ ಕುಮಾರಸ್ವಾಮಿ H D Kumaraswamy ಅವರು ಬಹಳದೊಡ್ಡವರು, ಕುಮಾರಸ್ವಾಮಿ ಯಾವಾಗ ಹೋರಾಟ ಮಾಡಿದ್ದಾರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ಹೋರಾಟವನ್ನು ಡಿಕೆಶಿ ಹೈಜಾಕ್ ಮಾಡಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಹಾಸನದಲ್ಲಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಬಹಳದೊಡ್ಡವರು, ಕುಮಾರಸ್ವಾಮಿ ಯಾವಾಗ ಹೋರಾಟ ಮಾಡಿದ್ದಾರೋ ಗೊತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ. ಹೋರಾಟ ಮಾಡೋದು ಅವರ ಮನಸ್ಸಿನಲ್ಲಿತ್ತು ಅಂಥಾ ಕುಮಾರಸ್ವಾಮಿ ಅಧಿವೇಶನದಲ್ಲಿ ಹೇಳಿದ್ದಾರೆ ಎಂದು ಹೇಳಿದರು.
ಇನ್ನ ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆ ಬಗ್ಗೆ ಸ್ಪೀಕರ್ ಬಸವರಾಜ ಹೊರಟ್ಟಿ ಅಸಮಾಧಾನ ವಿಚಾರವಾಗಿ ಮಾತನಾಡಿ, ಬಸವರಾಜ ಹೊರಟ್ಟಿ ಅವರು ಏನು ಮಾಡಿದರು ಸ್ವಾಗತ. ಅವರ ರಾಜಕೀಯಕ್ಕೋಸ್ಕರ ಏನು ಮಾಡಿದರೂ ಸ್ವಾಗತ ಎಂದಿದ್ದಾರೆ.
ಮಾಜಿಸಚಿವ ಎ.ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಇನ್ನೂ ಅರ್ಜಿ ನಮಗೆ ಬಂದಿಲ್ಲ. ಅರ್ಜಿ ಬಂದರೆ ಅಲ್ಲಂ ವೀರಭದ್ರಪ್ಪ ಸಮಿತಿ ಬಳಿ ಹೋಗುತ್ತೆ. ಅವರ ಮಗನಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ,
ನಾವೇ ಅವರನ್ನು ಮಂತ್ರಿ ಮಾಡಿದ್ದು, ಎ.ಮಂಜು ನನ್ನ ಒಳ್ಳೆಯ ಸ್ನೇಹಿತ, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಎಂದರು.








