ನಾನು ಕೆಲಸ ಮಾಡಿದರೂ ನಮ್ಮ ಪಕ್ಷಕ್ಕೆ ಜನ ವೋಟು ಹಾಕ್ತಿಲ್ಲ: ಹೆಚ್ ಡಿಕೆ
ಬೆಂಗಳೂರು : ನಾನು ಎಷ್ಟೇ ಕೆಲಸ ಮಾಡಿದರೂ ನಮ್ಮ ಪಕ್ಷಕ್ಕೆ ಜನ ವೋಟು ಹಾಕುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ದಾಸರಹಳ್ಳಿಯಲ್ಲಿ ಜೆಡಿಎಸ್ ಪಕ್ಷ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಕಷ್ಟಪಟ್ಟು ಕೆಲಸ ಮಾಡಿದೆ. ರೈತರ ಸಾಲಮನ್ನಾ ಮಾಡಿದೆ. ಹಲವಾರು ಯೋಜನೆಗಳನ್ನು ನೀಡಿದೆ. ಆದರೆ ಜನರು ಮಾತ್ರ ನನ್ನ ಕೈಹಿಡಿಯುತ್ತಿಲ್ಲ ಎಂದು ನೋವು ತೋಡಿಕೊಂಡರು.
ಕೆಲಸ ಮಾಡಿದವರಿಗೆ ವೋಟು ಹಾಕುವುದಿಲ್ಲ. ಕೆಲಸ ಮಾಡದವರಿಗೆ ಮಾತ್ರ ವೋಟು ಹಾಕಿ ಗೆಲ್ಲಿಸುತ್ತಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈಗೆ ಮತ್ತೆ ಕೈಕೊಟ್ರಾ ಹೈಕಮಾಂಡ್: ಸಂಪುಟ ವಿಸ್ತರಣೆ ಆಸೆಗೆ ಎಳ್ಳುನೀರು..!
ಕೆರೆಯನ್ನು ನುಂಗಿ ಅಧಿಕಾರಿಗಳು, ರಾಜಕಾರಣಿಗಳು ಹೈಫೈ ಕಾಲೋನಿ ಮಾಡಿಕೊಂಡಿದ್ದರು. ಆದರೆ ಮಳೆಗಾಲ ಬಂದಾಗ ಅಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ನನ್ನ ಅವಧಿಯಲ್ಲಿ ಇವುಗಳನ್ನು ಸರಿಪಡಿಸಿದೆ.
ಈ ಕಾರಣಕ್ಕಾಗಿ ಇಲ್ಲಿನ ಜನ ಹೆಲಿಕಾಪ್ಟರ್ ನಲ್ಲಿ ಹೂಮಳೆಗರೆದರು. 2009ರ ಚುನಾವಣೆಯಲ್ಲಿ ಜನರು ಮಾತ್ರ ನಮ್ಮ ಪಕ್ಷಕ್ಕೆ ಮತ ಹಾಕಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










