ಯಾರೂ ಸತ್ಯ ಹರಿಶ್ಚಂದ್ರರಲ್ಲ, ಎಲ್ಲರ ಮನೆ ದೋಸಿಯೂ ತೂತೆ : ಹೆಚ್ ಡಿಕೆ
ಬೆಂಗಳೂರು : ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕಪತ್ನಿವ್ರತಸ್ಥರಾ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯದ ಜನರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆ ಬಗ್ಗೆ ಗಮನ ಕೊಡಬೇಕು ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದ್ಯಾವ್ದೋ ಸಿಡಿ ವಿಚಾರ ತೆಗೆದುಕೊಂಡು ಚರ್ಚೆ ಮಾಡುತ್ತಿದ್ದಾರೆ. ಇಲ್ಲಿ ಕೆಲವೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತೆ. ಆದ್ರೆ ಇದನ್ನು ಇಟ್ಟುಕೊಂಡು ನಿಮ್ಮ ನಿಮ್ಮ ವಿಚಾರದ ಬಗ್ಗೆ ರಾಡಿ ಎರಚಿಕೊಂಡು ಜಗಳ ಮಾಡ್ತಿದ್ದಾರೆ.
ನಾನು ಕೂಡಾ ಹೇಳಿದ್ದೆ ಒಮ್ಮೆ ಎಡವಿದ್ದೆ ಅಂತ. ನಾನು ಮಂತ್ರಿಗಳಿಗೂ ಹೇಳೋದು ಅದೇ. ನೀವು ಕೋರ್ಟ್‍ಗೆ ಹೋಗಿ ಸ್ಟೇ ತೆಗೆದುಕೊಂಡು ಬಾರದೆ ಇದ್ದಿದ್ರೆ ಇದೆಲ್ಲಾ ಆಗ್ತಿರಲಿಲ್ಲ.
ಸದನದಲ್ಲಿ ರಾಜ್ಯದಲ್ಲಿ ಈ ವರ್ಷದ ಬಜೆಟ್ ಬಗ್ಗೆ ಚರ್ಚೆ ಮಾಡದೆ ಎಲ್ಲವನ್ನು ಪಾಸ್ ಮಾಡಿಕೊಂಡು ಹೋದ್ರೆ ಹೇಗೆ. ಇಂಥ ವಿಷಯಗಳನ್ನು ಗಹನವಾಗಿ ಚರ್ಚೆ ಮಾಡಬೇಕಿದೆ.
ಸರ್ಕಾರ ಎಲ್ಲಿ ಎಡುವುತ್ತಿದೆ ಅನ್ನೋದ್ರ ವಿಷಯ ಚರ್ಚೆ ಮಾಡಬೇಕಿದೆ. ಇದ್ಯಾವ್ದೋ ಸಬ್ ಜೆಟ್ಟ್ ಇಟ್ಟುಕೊಂಡು ಸದನದ ಮಾನ ಹರಾಜು ಹಾಕ್ತಿದ್ದಾರೆ. ಎಲ್ಲರ ಮನೆ ದೋಸೆಯೂ ತೂತೆ.
ಅದೊಂದ ದೇವರು ಕೊಟ್ಟಿರೋ ಸಹಜ ಕ್ರಿಯೆ. ಭೂಮಿ ಮೇಲೆ ಇರೋ ಜಾತಿಯ ಪ್ರಾಣಿಗಳೂ ಕೂಡಾ ಪ್ರಕ್ರಿಯೆ ಮಾಡ್ತಾರೆ. ಅದು ನಾಲ್ಕು ಗೋಡೆಗಳ ನಡುವೆ ನಡೆಯೋ ಕ್ರಿಯೆ ಈಗ ಬೀದಿಗೆ ಬಂದಿದೆ.
ಇದನ್ನ ಸದನದಲ್ಲಿ ಚರ್ಚೆ ಮಾಡೋ ಅವಶ್ಯಕತೆ ಇತ್ತಾ? ನಮ್ಮ ಹೆಸರು ಯಾಕೆ ತಗೆದಿದಾರೆ ಅಂತ ಗೊತ್ತಿಲ್ಲ. ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ. ನನ್ನ ಹೆಸರನ್ನು ಅವ್ರು ಯಾಕೆ ತಂದ್ರು.
ನಾನು ಧೈರ್ಯವಾಗಿ ಹೇಳಿದ್ದೇನೆ. ಭೂಮಿ ಮೇಲೆ ಇರೋ ಪ್ರತಿಯೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ.
ಇದ್ರಲ್ಲಿ ಹರಿಶ್ಚಂದ್ರ ಯಾರು ಅನ್ನೋದು ಚರ್ಚೆ ಮಾಡಿದ್ರೆ, ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ. ಜನರ ಮೇಲೆ ಒಂದು ದೃಷ್ಟಿ ಇರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.