ಮಂಡ್ಯದಲ್ಲಿ ಸೋಲಿಸಿದ್ದೀರಾ, ಅಲ್ಲಿಂದಲೇ ಮುಂದಿನ ರಾಜಕಾರಣ ಪ್ರಾರಂಭ : ಹೆಚ್ ಡಿಕೆ H D Kumaraswamy
ಬೆಂಗಳೂರು : ಮುಂದಿನ ರಾಜಕಾರಣವನ್ನು ಮಂಡ್ಯದಲ್ಲಿ ತೋರಿಸುತ್ತೇನೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದಿರಾ ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ ಎಂದು ಸಂಸದೆ ಸುಮಲತಾ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಸುಮಲತಾಗೆ ನಾನೇಕೆ ಕ್ಷಮೆ ಕೇಳಬೇಕು..? ನಾನು ಯಾವತರ ಪದಗಳ ಮಾಡಬೇಕಾಗಿತ್ತು, ಕ್ಷಮೆ ಕೇಳಬೇಕಾದ ಪದ ಬಳಕೆ ಮಾಡಿಲ್ಲ. ಕನ್ನಡ ಪದ ಬಳಕೆ ಸಂಸ್ಕೃತಿ ಬಗ್ಗೆ ನನಗೆ ಗೊತ್ತಿದೆ ಅವರು ಹೇಳಿಕೊಡಬೇಕಾಗಿಲ್ಲ ಎಂದು ಹೇಳಿದರು.
ಕೆಆರ್‍ಸ್ ಬಿರುಕು ಬಿಟ್ಟಿದ್ದರೆ ಅಲ್ಲಿಗೆ ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಬೇಕಾಗಿತ್ತು. ಅದರ ಬದಲಿಗೆ ಗಣಿಗಾರಿಕೆ ತೋರಿಸಲು ಹೋಗಿದ್ದಾರೆ.
ಸಿನಿಮಾದಲ್ಲಿ ನಡೆಸುವ ರಾಜಕಾರಣವನ್ನು ಇಲ್ಲಿಯೂ ನಡೆಸುತ್ತೆನೆ ಅಂದುಕೊಂಡಿದ್ದಾರೆ. ಮುಂದಿನ ರಾಜಕಾರಣವನ್ನು ಮಂಡ್ಯದಲ್ಲಿ ತೋರಿಸುತ್ತೇನೆ.
ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದಿರಾ ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ. ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತ ಜನತೆಗೆ ಗೊತ್ತಿದೆ.
ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಾರೆ. ಅವತ್ತು ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಅಂದಿದ್ದು ಅವರು. ಮಂಡ್ಯಕ್ಕೆ ತೆಗೆದುಕೊಂಡು ಹೋದ ಮೇಲೆ ಮಣ್ಣನ್ನು ಹಚ್ಚಿಕೊಂಡ್ರು ಎಂದು ಗರಂ ಆದರು.








