ರಾಜ್ಯದಲ್ಲಿರುವ ಬಿಜೆಪಿ ಎಂಪಿಗಳು ನರ ಸತ್ತು ಹೋಗಿದ್ದಾರೆ : ಹೆಚ್.ಡಿ.ರೇವಣ್ಣ
ಹಾಸನ : ರಾಜ್ಯದಲ್ಲಿರುವ ಬಿಜೆಪಿ ಎಂಪಿಗಳು ನರ ಸತ್ತು ಹೋಗಿದ್ದಾರೆ. ಇದಕ್ಕೆ 28 ಜನ ಎಂಪಿಗಳನ್ನು ಗೆಲ್ಲಿಸಿದ್ದು, ನಿಮಗೆ ನಾಚಿಕೆ, ಮಾನ-ಮಾರ್ಯದೆ ಇದ್ದರೆ ರಾಜೀನಾಮೆ ಕೊಟ್ಟು ಹೊರ ಹೋಗ್ರಿ, ರಾಜ್ಯದ ಮತದಾರರಿಗೆ ಎಂಪಿಗಳು ಮೋಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಕಿಡಿಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಜನ ಉಳಿಸಿಕೊಳ್ಳೋಕೆ ಆಗಲ್ಲ ಅಂದ್ರೆ ಹೇಳಿಬಿಡಿ, ಪಾಪರ್ ಚೀಟಿ ತೆಗೆದುಕೊಂಡಿದ್ದೇವೆ, ಪಾಪರ್ ಬಿದ್ದು ಹೋಗಿದ್ದೇವೆ ಅಂತ ಒಪ್ಪಿಕೊಳ್ಳಿ. ರಾಜ್ಯದ ಮತದಾರರಿಗೆ ಎಂಪಿಗಳು ಮೋಸ ಮಾಡುತ್ತಿದ್ದಾರೆ. ಟಿಎ, ಡಿಎ ತಗೊಂಡು ವಿಮಾನದಲ್ಲಿ ಓಡಾಡೋಕೆ ಮಾತ್ರ ಇದ್ದಾರೆ. ನಾಚಿಕೆ ಆಗಲ್ವೇನ್ರೀ ನಿಮಗೆ ರಾಜೀನಾಮೆ ಕೊಟ್ಟು ಬನ್ರೀ ಎಂದು ಕಿಡಿಕಾರಿದ್ದಾರೆ.
ಇನ್ನು ನಾಡಿದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಬಂದ ದಿನ ಮಾಧ್ಯಮದವರನ್ನು ಒಳಗೆ ಬಿಡಲಿಲ್ಲ ಅಂದ್ರೆ ನಾನು ಸಿಎಂ ಮುಂದೆ ಧರಣಿ ಕೊರುತ್ತೇನೆ. ಇಲ್ಲಂದ್ರೆ ಸಭೆಯಿಂದ ಹೊರ ಹೋಗುತ್ತೇನೆ. ನಿಮ್ಮ ಮನೆ ಕಾಯೋಗ ನಮ್ಮ ಮನೆ ಊಳಿಸಿಕೊಡಿ ಎಂದು ಬೇಡಿಕೊಳ್ಳುತ್ತೇನೆ ಎಂದು ಗರಂ ಆದರು.









