ರಾಮನಗರ ಜಿಲ್ಲೆ ಮಾಡಿದ್ದು ನಾನು, ಕುಮಾರಸ್ವಾಮಿ : ಹೆಚ್.ಡಿ.ರೇವಣ್ಣ
ಹಾಸನ : ರಾಮನಗರ ಜಿಲ್ಲೆ ಮಾಡಿದ್ದು ನಾನು ಕುಮಾರಸ್ವಾಮಿ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಸಚಿವ ಅಶ್ವಥ್ ನಾರಾಯಣ್ – ಸಂಸದ ಡಿ.ಕೆ.ಸುರೇಶ್ ನಡುವೆ ವಾಗ್ವಾದ ವಿಚಾರವಾಗಿ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ.ರೇವಣ್ಣ, ರಾಮನಗರವನ್ನ ಜಿಲ್ಲೆ ಮಾಡಿದ್ದು, ನಾನು ಕುಮಾರಸ್ವಾಮಿ.
ರಾಮನಗರದಲ್ಲಿ ಡೈರಿ, ಡಿಸಿಸಿ ಬ್ಯಾಂಕ್ ಮಾಡಲು ಈ ಅಣ್ಣತಮ್ಮ ಬಿಡಲಿಲ್ಲ ಅಡ್ಡಗಾಲು ಹಾಕಿ ನಿಲ್ಸಿದ್ರು. ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಅವರದ್ದೇ ಕೊಡುಗೆ ಇದೆ ಎಂದು ಡಿಕೆ ಬ್ರದರ್ಸ್ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಕುರಿತಂತೆ ಮಾತನಾಡಿ, ಕಾಂಗ್ರೆಸ್ ಮುಳುಗುತ್ತಿರುವುದಕ್ಕೆ ಕೃಷ್ಣ ನಡೆ, ಮೇಕೆದಾಟು ನಡೆ ಮಾಡಲು ಹೊರಟಿದ್ದಾರೆ.
ಮೇಕೆದಾಟು ಪಾದಯಾತ್ರೆ ಹದಿನೈದು ದಿನ ಬಿಟ್ಟು ಮಾಡಿದರೆ ಏನಾಗುತ್ತೆ, ಒಂದೆರಡು ತಿಂಗಳು ಬಿಟ್ಟು ಮಾಡಲಿ ಎಂದು ಸಲಹೆ ನೀಡಿದರು.
ಇನ್ನು ಕಾಂಗ್ರೆಸ್ ನವರು ಬಿಜೆಪಿ ಸರ್ಕಾರ 40% ಕಮೀಷನ್ ಸರ್ಕಾರ ಅಂತಾರೆ. ಅದನ್ನ ಶುರು ಮಾಡಿದ್ದೇ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.









