ಕೊರೊನಾ ಓಡಿಸಿ ಅಂದ್ರೆ ಐಎಎಸ್ ಅಧಿಕಾರಿಯನ್ನ ಓಡಿಸಿದ್ದಾರೆ : ಹೆಚ್.ವಿಶ್ವನಾಥ್ H Vishwanath
ಮೈಸೂರು : ಪ್ರಧಾನಿ ಮೋದಿ ಕೊರೊನಾ ಓಡಿಸಿ ಎಂದು ಕರೆ ನೀಡಿದ್ರೆ ಇವರೆಲ್ಲ ಐಎಎಸ್ ಅಧಿಕಾರಿಗಳನ್ನ ಓಡಿಸುತ್ತಿದ್ದಾರೆ.
ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕನ್ನಿಟ್ಟು ರೋಹಿಣಿ ಸಿಂಧೂರಿಯನ್ನ ಶೂಟ್ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಎಂಎಲ್ ಸಿ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು ಭೂಹಗರಣದ ವಿಚಾರವಾಗಿ ಮಾತನಾಡಿದ ಹೆಚ್. ವಿಶ್ವನಾಥ್, ಚಾಮುಂಡಿ ಬೆಟ್ಟದ ಸುತ್ತ ಮುತ್ತಲಿನ ಜಾಗವನ್ನೂ ಒತ್ತುವರಿ ಮಾಡಲಾಗಿದೆ.
ಮೈಸೂರು ಈಗ ರಿಯಲ್ ಎಸ್ಟೇಟ್ ಆಗಿ ಹೋಗಿದೆ. ಈ ಹಗರಣದಲ್ಲಿ ಶಿಲ್ಪಾನಾಗ್ ಬಲಿಪಶು ಆಗಿದ್ದಾರೆ. ಪ್ರಧಾನಿ ಮೋದಿ ಕೊರೊನಾ ಓಡಿಸಿ ಎಂದು ಕರೆ ನೀಡಿದ್ರೆ ಇವರೆಲ್ಲ ಐಎಎಸ್ ಅಧಿಕಾರಿಗಳನ್ನ ಓಡಿಸುತ್ತಿದ್ದಾರೆ.
ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕನ್ನಿಟ್ಟು ರೋಹಿಣಿ ಸಿಂಧೂರಿಯನ್ನ ಶೂಟ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇನ್ನು ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಇಬ್ಬರೂ ಒಳ್ಳೆಯ ಅಧಿಕಾರಿಗಳು. ಆದರೆ ರಾಜಕಾರಣಿಗಳ ಸ್ವಾರ್ಥದಿಂದ ಈ ರೀತಿ ಆಗಿದೆ ಎಂದು ಅಸಮಧಾನ ಹೊರಹಾಕಿದರು.
ಅಲ್ಲದೇ ರೋಹಿಣಿ ಸಿಂಧೂರಿಯನ್ನ ಆರು ತಿಂಗಳುಗಳ ಕಾಲ ವಿಶೇಷ ಅಧಿಕಾರಿಯಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.