ಮಾರ್ಚ್ 1ರಿಂದ ಎಚ್ -1ಬಿ ವೀಸಾ ಅರ್ಜಿ ನೋಂದಣಿ ಪ್ರಕ್ರಿಯೆ ಆರಂಭ
ವಾಷಿಂಗ್ಟನ್ : ಮುಂದಿನ ಹಣಕಾಸು ವರ್ಷ (ಅಕ್ಟೋಬರ್ 1ರಿಂದ 2022) ಕ್ಕಾಗಿ ಎಚ್ -1ಬಿ ವೀಸಾ ಅರ್ಜಿಗಳ ನೋಂದಣಿ ಪ್ರಕ್ರಿಯೆ ಇದೇ ಮಾರ್ಚ್ 1ರಿಂದ ಆರಂಭವಾಗಲಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್ ಸಿಐಎಸ್ ) ಪ್ರಕಟಿಸಿದೆ.
ಲಾಟರಿ ಮೂಲಕ ಎಚ್ -1ಬಿ ವೀಸಾ ನೀಡಲಾಗುವುದು ಎಂದು ಯುಎಸ್ ಸಿಐಎಸ್ ಹೇಳಿದೆ.
ಕಂಪ್ಯೂಟರ್ ಆಧಾರಿತ ಲಾಟರಿ ಫಲಿತಾಂಶವನ್ನು ಮಾರ್ಚ್ 31ರಂದು ಬಹಿರಂಗಗೊಳಿಸಲಾಗುವುದೆಂದು ಅಧಿಸೂಚನೆ ಹೊರಡಿಸಲಾಗಿದೆ.
ಎಚ್ -1ಬಿ ವೀಸಾಗಳಿಗೆ ವಿದೇಶಿ ವೃತ್ತಿಪರರಿಂದ ಹೆಚ್ಚಿನ ಬೇಡಿಕೆ ಇದೆ.
ಈ ವೀಸಾಗಳ ವಿತರಣೆಯಲ್ಲಿ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಲಾಟರಿ ಪದ್ಧತಿಯನ್ನು ಮುಂದುವರಿಸಲು ಜೋ ಬಿಡೆನ್ ಸರ್ಕಾರ ಇತ್ತೀಚೆಗೆ ನಿರ್ಧರಿಸಿತು.
ಎಚ್-1ಬಿ ವೀಸಾ ಪಡೆದವರು ಅಕ್ಟೋಬರ್ 1ರಿಂದ ಅಮೆರಿಕ ಉದ್ಯೋಗದಲ್ಲಿ ಸೇರಬಹುದು.