ಬಾಗಲಕೋಟೆ: ಹೇರ್ ಡ್ರೈಯರ್ ಬ್ಲಾಸ್ಟ್ (Hair Dryer Blast) ಆದ ಪರಿಣಾಮ ಮಹಿಳೆಯೊಬ್ಬರ ಎರಡೂ ಕೈ ಕಟ್ ಆಗಿರುವ ಘಟನೆ ನಡೆದಿದೆ.
ಈ ಘಟನೆ ಇಳಕಲ್ (Ilkal) ನಗರದಲ್ಲಿ ನಡೆದಿದೆ. ಮಾಜಿ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. ಶಶಿಕಲಾ ಎಂಬುವರ ಹೆಸರು, ನಂಬರ್ ಹೊಂದಿದ್ದ ಪಾರ್ಸಲ್ ಕೊರಿಯರ್ಯೊಂದು ಬಂದಿತ್ತು. ಶಶಿಕಲಾ ಅವರು ಕೂಡ ಮೃತ ಯೋಧನ ಪತ್ನಿಯಾಗಿದ್ದರು. ಕೊರಿಯರ್ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಅವರು ಊರಲ್ಲಿ ಇರದ ಕಾರಣ ಬಸಮ್ಮನಿಗೆ ಕೊರಿಯರ್ ತೆಗೆದುಕೊಳ್ಳಲು ಆಗಿರಲಿಲ್ಲ. ಹೀಗಾಗಿ ಬಸಮ್ಮ ಅವರಿಗೆ ತೆಗೆದುಕೊಳ್ಳಲು ಹೇಳಿದ್ದರು.
ಬಸಮ್ಮ ತೆಗೆದುಕೊಂಡು ಅದನ್ನು ಪರಿಶೀಲಿಸಿ, ಆನ್ ಮಾಡಿದಾಗ ಅದು ಬ್ಲಾಸ್ಟ್ ಆಗಿದೆ. ಕೂಡಲೇ ಅವರ ಕೈಗಳು ತುಂಡಾಗಿವೆ. ರಕ್ತ ಹರಿದಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಶಿಕಲಾ ಅವರನ್ನು ವಿಚಾರಿಸಿದಾಗ, ಅವರು ಹೇರ್ ಡ್ರೈಯರ್ ಆರ್ಡರ್ ಮಾಡಿರಲಿಲ್ಲ ಎಂದಿದ್ದಾರೆ. ಹಾಗಾದರೆ, ಅದನ್ನು ಯಾರು ಕಳುಹಿಸಿದ್ದಾರೆ? ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.