ಹೈಟಿ ಅಧ್ಯಕ್ಷರ ಹತ್ಯೆ ಪ್ರಕರಣ – 17 ಶಂಕಿತರ ಬಂಧನ
ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರನ್ನ ಅವರ ನಿವಾಸದಲ್ಲಿಯೇ ಬರ್ಬರವಾಗಿ ಹತ್ಯೆಗೈದ ಬಳಿಕ ಇಡೀ ದೇಶವೇ ಬೆಚ್ಚಿಬಿದ್ದಿದೆ.. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಮೆರಿಕಾ ಪ್ರಜೆಗಳು ಸೇರಿದಂತೆ ಒಟ್ಟು ಇದುವರೆಗೆ 17 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.
ವಶಪಡಿಸಿಕೊಂಡವರಲ್ಲಿ 15 ಮಂದಿ ಕೊಲಂಬಿಯಾದವರು , ಇಬ್ಬರು ಅಮೆರಿಕಾದ ಪ್ರಜೆಗಳು ಎಂದು ಗುರುತಿಸಲಾಗಿದೆ. ಹೈಟಿಯ ರಾಷ್ಟ್ರೀಯ ಪೊಲೀಸ್ ಪಡೆ ಮುಖ್ಯಸ್ಥ ಲಿಯಾನ್ ಚಾರ್ಲ್ಸ್ ತಿಳಿಸಿದ್ದಾರೆ. ಕನಿಷ್ಠ 6 ಮಂದಿ ತನ್ನ ಸೇನೆಯಲ್ಲಿದ್ದರು ಎನ್ನುವುದು ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೊಲಂಬಿಯಾ ಸರ್ಕಾರ ತಿಳಿಸಿದೆ.
ತನಿಖೆಗಾಗಿ ಅತ್ಯುತ್ತಮ ತನಿಖಾಧಿಕಾರಿಗಳನ್ನು ಒಳಗೊಂಡಿರುವ ತಂಡವನ್ನು ರಚಿಸಲಾಗಿದೆ. ಹೈಟಿ ಪೊಲೀಸರ ಜತೆ ಈ ತಂಡವು ಸಂಪರ್ಕದಲ್ಲಿದ್ದು, ಅಗತ್ಯ ಇರುವ ಎಲ್ಲ ಮಾಹಿತಿ ಮತ್ತು ಸಹಕಾರವನ್ನು ನೀಡಲಿದೆ ಎಂದು ಕೋಲಂಬಿಯಾದ ರಾಷ್ಟ್ರೀಯ ಪೊಲೀಸ್ ಪಡೆಯ ಮುಖ್ಯಸ್ಥ ಜನರಲ್ ಜಾರ್ಜ್ ಲುಯಿಸ್ ವರ್ಗಾಸ್ ವಲೆನ್ಸಿಯಾ ತಿಳಿಸಿದ್ದಾರೆ.
ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ ಹಸಿವಿನಿಂದ ಸಾವನಪ್ಪುತ್ತಿರುವವರ ಸಂಖ್ಯೆ – ಕೋವಿಡ್ ಗಿಂತಲೂ ಹೆಚ್ಚಿನ ಜನ ಹಸಿವಿನಿಂದ ಸಾವು..!