ಒಂದೇ ಬಾರಿಗೆ 9 ಮಕ್ಕಳಿಗೆ ಜನನ – ಕ್ಷೇಮವಾಗಿ ಮನೆಗೆ ಮರಳಿದ ತಾಯಿ ,ಮಕ್ಕಳು…
ಕಳೆದ ವರ್ಷ ಮೊರಾಕೊದಲ್ಲಿ ಒಂಬತ್ತು ಶಿಶುಗಳಿಗೆ ಜನ್ಮ ನೀಡಿದ ಮಾಲಿಯನ್ ತಾಯಿ ತನ್ನ ಶಿಶುಗಳೊಂದಿಗೆ ಮಂಗಳವಾರ ಮನೆಗೆ ಮರಳಿದರು ಎಂದು ಆರೋಗ್ಯ ಸಚಿವ ಡಿಮಿನಾಟೌ ಸಂಗಾರೆ ತಿಳಿಸಿದ್ದಾರೆ.
ಮಾಲಿ ದೇಶದ ಟಿಂಬಕ್ಟುವಿನ ಹಲೀಮಾ ಸಿಸ್ಸೆ ಎಂಬ ಯುವತಿ ಮೇ 2021 ರಲ್ಲಿ ಕಾಸಾಬ್ಲಾಂಕಾದಲ್ಲಿ ಐದು ಹುಡುಗಿಯರು ಮತ್ತು ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಳು.
ಮಾಲಿಯ ಸರ್ಕಾರವು ಅವಳನ್ನ ಉತ್ತಮ ಚಿಕಿತ್ಸೆಗಾಗಿ ನಗರದ ಐನ್ ಬೋರ್ಜಾ ಚಿಕಿತ್ಸಾಲಯಕ್ಕೆ ಶಿಫ್ಟ್ ಮಾಡಲಾಗಿತ್ತು. ಇಲ್ಲಿ ಬಹು ಗರ್ಭದಾರಣೆಗೆ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿತ್ತು.
ಇದೀಗ ಹಲೀಮಾ ಸಿಸ್ಸೆ ತನ್ನ ಮಕ್ಕಳೊಂದಿಗೆ ಆರೋಗ್ಯವಾಗಿ ಆಗಮಿಸಿರುವ ಬಗ್ಗೆ ಆರೋಗ್ಯ ಸಚಿವ ಸಂಗಾರೆ ಪೇಸ್ ಬುಕ್ ನ ಪುಟದಲ್ಲಿ ಪೋಟೋದೊಂದಿಗೆ ಬರೆದುಕೊಂಡಿದ್ದಾರೆ.
“ಅವರು ಉತ್ತಮ ಆರೋಗ್ಯದಿಂದಿರುವುದನ್ನು ನೋಡಿ ಸಂತೋಷ ಮತ್ತು ತೃಪ್ತಿಯಾಗಿದೆ. ತಾಯಿ ಮತ್ತು ಶಿಶುಗಳು ಉತ್ತಮವಾಗಿ ಮಾಲಿಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ” ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ತಾಯಿ ಆಸ್ಪತ್ರೆಗೆ ದಾಖಲಾದಾಗ ಆಕೆ 25 ವಾರಗಳ ಗರ್ಭಿಣಿಯಾಗಿದ್ದಳು. ವೈದ್ಯಕೀಯ ಸಿಬ್ಬಂದಿ ಆಕೆಯ ಅವಧಿಯನ್ನು 30 ವಾರಗಳಿಗೆ ವಿಸ್ತರಿಸುವಲ್ಲಿ ಯಶಸ್ವಿಯಾದರು.
25 ಅರೆವೈದ್ಯರ ನೆರವಿನಿಂದ 10 ವೈದ್ಯರ ತಂಡವನ್ನು ಬಳಸಿಕೊಂಡು ಸಿಸೇರಿಯನ್ ಮೂಲಕ ಎಲ್ಲರಿಗೂ ಸುರಕ್ಷಿತವಾಗಿ ಮತ್ತು ಸುರಕ್ಷಿತವಾಗಿ ಡಿಲೆವರಿ ಮಾಡಲಾಯಿತು.
Halima Cisse, a young woman from the northern city of Timbuktu, gave birth to five girls and four boys in Casablanca in May 2021.








