ಗಾಜಾ – ಇಸ್ರೇಲ್ ಕದನ ವಿರಾಮಕ್ಕೆ ಅಮೆರಿಕಾ ಮೇಲೆ ವಿಶ್ವ ನಾಯಕರ ಒತ್ತಡ – ಹಮಾಸ್ ದಾಳಿಯನ್ನ ಖಂಡಿಸಿದ ಭಾರತ..!
ಇಸ್ರೇಲ್ ನಲ್ಲಿ ಹಮಾಸ್ ಬಮಡುಕೋರರು ನಡೆಸುತ್ತಿರುವ ವೈಮಾನಿಕ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಗಜಾ ಸಿಟಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಕ್ಕಳು , ಮಹಿಳೆಯರು ಸೇರಿ ಅನೇಕ ಜೀವಗಳು ಹೋಗಿವೆ. ದಾಳಿ ತೀವ್ರ ಸ್ವರೂಪ ಪಡೆದಿದ್ದು, ಎಲ್ಲಿ ನೋಡಿದ್ರು ರಾಕೆಟ್ ದಾಳಿ , ಹೆಣಗಳ ರಾಶಿಗಳೇ ಕಂಡುಬರುತ್ತಿದೆ.
ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಮುಸ್ಲಿಂ ನಾಯಕರು, ಸಚಿವರು ಭಾನುವಾರ ತುರ್ತು ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಇಸ್ರೇಲ್ ಮತ್ತು ಹಮಾಸ್‌ನ ಬಂಡುಕೋರರಲ್ಲಿ ಸಂಘರ್ಷವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ಇಸ್ರೇಲ್‌ಗೆ ಕದನ ವಿರಾಮ ಘೋಷಿಸುವಂತೆ ಅಮೆರಿಕ ಒತ್ತಡ ಹೇರಬೇಕು ಎಂದು ಹಲವು ರಾಜತಾಂತ್ರಿಕ ಅಧಿಕಾರಿಗಳು ಅಧ್ಯಕ್ಷ ಜೋ ಬೈಡನ್ ಆಡಳಿತವನ್ನು ಒತ್ತಾಯಿಸಿದ್ದಾರೆ. ಆದರೆ ಜೋ ಬೈಡನ್ ಅವರು ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷವನ್ನು ನಿಲ್ಲಿಸಲು ಅಮೆರಿಕವು ಸತತವಾಗಿ ಪ್ರಯತ್ನಿಸುತ್ತಿದೆ ಎಂದರು.
ಈ ಶಸ್ತ್ರಾಸ್ತ್ರ ಸಂಘರ್ಷವು ದಶಕಗಳ ಹಳೆಯ ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಲಿಂಡಾ ಥಾಮಸ್ ಎಚ್ಚರಿಕೆ ನೀಡಿದ್ದಾರೆ.
2014ರಿಂದ ಇಸ್ರೇಲ್ ಮತ್ತು ಗಾಜಾದ ಹಮಾಸ್ ನ ಬಂಡುಕೋರರ ನಡುವೆ ಸಂಘರ್ಷವು ಈಗ ಇನ್ನಷ್ಟು ಹೆಚ್ಚಾಗಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಬೈಡನ್ ಆಡಳಿತವು ತನ್ನ ವಿದೇಶಾಂಗ ನೀತಿಗಳನ್ನು ಮಧ್ಯ ಪ್ರಾಚ್ಯ ಮತ್ತು ಅಫ್ಗಾನಿಸ್ತಾನದಿಂದ ದೂರವಿರಲು ನಿರ್ಧರಿಸಿದೆ.
ಇನ್ನೂ ಇಸ್ರೇಲ್ ಮತ್ತು ಪ್ಯಾಲಸ್ಟೈನ್ ತಕ್ಷಣ ನೇರ ಮಾತುಕತೆಗಳನ್ನು ಮುಂದುವರಿಸಬೇಕು ಹಾಗೂ ಭಾರತ ಪ್ಯಾಲಸ್ಟೈನ್ ನ ನ್ಯಾಯಬದ್ಧ ಉದ್ದೇಶವನ್ನು ಹಾಗೂ ಎರಡು-ದೇಶ ಪರಿಹಾರವನ್ನು ಬೆಂಬಲಿಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ವರ್ಚುಯಲ್ ಸಭೆಯಲ್ಲಿ ಆಗ್ರಹಿಸಿದ್ಧಾರೆ.
ಇದೇ ವೇಳೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಸುವ್ಯವಸ್ಥೆಯನ್ನು ಹದಗೆಡಿಸಿವೆ. ಗಾಜಾ ದಿಂಧ ನಡೆಯುತ್ತಿರುವ ಅನಿಯಂತ್ರಿತ ರಾಕೆಟ್ ದಾಳಿಗಳು ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿವೆ, ಇದನ್ನು ನಾವು ಖಂಡಿಸುತ್ತೇವೆ ಎಂದಿದ್ಧಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








