ಹಂಪಿಯಲ್ಲಿ ರೈಲು ಮಾದರಿಯ ವಿಶೇಷ ವಾಹನಗಳ ಸಂಚಾರ ಆರಂಭ..!
ವಿಜಯನಗರ : ವಿಶ್ವ ವಿಖ್ಯಾತ ಹಂಪಿ ಕಲೆ ಸಂಸ್ಕೃತಿಗೆ ಪ್ರವಾಸಿಗರಿಗೆ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಇಲ್ಲಿನ ವಿಶೇಷತೆಗಳು ಮತ್ತಷ್ಟು ಮೇರು ಪಡೆದುಕೊಂಡಿವೆ. ಕಾರಣ ವಿಶ್ವ ವಿಖ್ಯಾತ ಹಂಪಿಯಲ್ಲಿ ರೈಲು ಮಾದರಿಯವಿಶೇಷ ವಾಹನಗಳು ಸಂಚಾರ ಆರಂಭಿಸಿವೆ. ಒಂದು ಡೀಸೆಲ್ ಚಾಲಿತ, ಎಲೆಕ್ಟ್ರಿಕ್ ಹಾಗೂ ಬ್ಯಾಟರಿಚಾಲಿತ ವಾಹನಗಳು ಇವಾಗಿದ್ದು, ಈ 3 ವಾಹನಗಳನ್ನ ರೈಲು ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿುವುದು ವಿಶೇಷವಾಗಿದೆ.
ಬೆಂಗಳೂರಿನ ಪ್ರಿವಿಲೆನ್ಸ್ ಕಂಪನಿ ಈ ವಾಹನಗಳನ್ನ ಸಿದ್ಧಪಡಿಸಿದ್ದು, ಇವು ಮತ್ತಷ್ಟು ಪ್ರವಾಸಿಗರನ್ನ ಆಕರ್ಶಿಸುತ್ತಿವೆ. ಹಂಪಿ ಆನ್ ವೀಲ್ಸ್ ಎಂದು ಈ ವಾಹನಗಳಿಗೆ ಹೆಸರಿಡಲಾಗಿದೆ. ಈ ವಾಹನಗಳು ಹಂಪಿ ಪರಿಸರದಲ್ಲಿ ನಿನ್ನೆ ಪ್ರಾಯೋಗಿಕವಾಗಿ ಓಡಾಟ ಆರಂಭಿಸಿವೆ.
ಎಂಜಿನ್ ಒಳಗೊಂಡಂತೆ ಒಟ್ಟು ಎರಡು ಬೋಗಿಗಳನ್ನು ಒಳಗೊಂಡ ಈ ವಾಹನದಲ್ಲಿ ಏಕಕಾಲದಲ್ಲಿ ಒಟ್ಟು 30 ಜನ ಪ್ರಯಾಣಿಸಬಹುದಾಗಿದೆ. ವಾಹನಗಳ ಪ್ರಾಯೋಗಿಕ ಓಡಾಟ ಪೂರ್ಣಗೊಂಡ ನಂತರ ವಾಣಿಜ್ಯ ಸಂಚಾರ ಶುರುವಾಗಲಿದೆ. ಈ ವಾಹನಗಳು ಪ್ರವಾಸಿಗರಿಗೆ ರಾಣಿ ಸ್ನಾನಗೃಹ, ವಿರೂಪಾಕ್ಷೇಶ್ವರ ದೇವಸ್ಥಾನ, ಮಹಾನವಮಿ ದಿಬ್ಬ, ಬಸವಣ್ಣ ಮಂಟಪ, ಉಗ್ರ ನರಸಿಂಹ, ಆನೆಸಾಲು ಮಂಟಪ, ನೆಲಸ್ತರ ಶಿವ ದೇವಾಲಯ, ಸಾಸಿವೆಕಾಳು, ಕಡಲೆಕಾಳು ಗಣಪ ಸ್ಮಾರಕ ಸೇರಿದಂತೆ ಇನ್ನಿತರ ಪ್ರಮುಖ ಸ್ಮಾರಕಗಳಿಗೆ ಸಂಪರ್ಕ ಕಲ್ಪಿಸಲಿವೆ.
ಕಮಲಾಪುರದ ವಸ್ತು ಸಂಗ್ರಹಾಲಯ ಅಥವಾ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮಯೂರ ಭುವನೇಶ್ವರಿ ಹೋಟೆಲ್ ನಿಂದ ಈ ವಾಹನಗಳ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಇನ್ನೂ ಈ ವಾಹನಗಳಲ್ಲಿ ಸಂಚಾರಕ್ಕೆ ಒಬ್ಬರಿಗೆ ತಲಾ 300 ರೂಪಾಯಿಗಳ ಪ್ರಯಾಣ ದರವನ್ನ ನಿಗದಿಪಡಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಇಸ್ಲಾಂ ಧರ್ಮ ನಂಬದ ಕಾರಣ ಮದರ್ ತೆರೇಸಾ ನರಕಕ್ಕೆ ಹೋಗುತ್ತಾರೆ – ಝಾಕೀರ್ ನಾಯ್ಕ್ ವಿವಾದಾತ್ಮಕ ಹೇಳಿಕೆ
ಯೂಟ್ಯೂಬ್ ನಲ್ಲಿ ಮತ್ತೆ ಮಂಗ್ಲಿ ಹವಾ…! ಹೊಸ ಹಾಡು ಟ್ರೆಂಡಿಂಗ್ ನಲ್ಲಿ..!
RSS ನಾಯಕ ಹಾಗೂ ಬಿಜೆಪಿ ಕೇಂದ್ರ ಸಚಿವರ ಮಗಳು ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ..!
ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ರಶ್ಮಿಕಾಗೆ ಗೇಟ್ ಪಾಸ್..?
ಅಲ್ಲು ಅರ್ಜುನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಕಿಂಗ್ ಮೇಕರ್ ಪ್ರಶಾಂತ್ ನೀಲ್..!
ಸುದ್ದಿಗೋಷ್ಠಿಯಲ್ಲಿ `ಸಾಹುಕಾರ್ ರಾಜಕೀಯ ವೈರಾಗ್ಯದ ಮಾತು’
ಮಾಜಿ ಸಂಸದ ವಿರೂಪಾಕ್ಷಪ್ಪ ಬಿಜೆಪಿಗೆ ಸೇರ್ಪಡೆ