ತವರು ಜಿಲ್ಲೆಯಲ್ಲಿ ಗೆಲುವಿನ ಕೇಕೆ ಹಾಕಿದ ಕಾಂಗ್ರೆಸ್ congress saaksha tv
ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ತವರು ಜಿಲ್ಲೆಯಲ್ಲಿ ತೀವ್ರ ಮುಖಭಂಗವಾಗಿದೆ.
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋಲುಂಡಿದ್ದು, ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿದೆ.
ಕಳೆದ ಶನಿವಾರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯಿತು.
ಇದರ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಜಯ ಸಾಧಿಸಿದ್ದಾರೆ.
13ನೇ ಸುತ್ತು ಮುಕ್ತಾಯಕ್ಕೆ ಕಾಂಗ್ರೆಸ್‍ನ ಶ್ರೀನಿವಾಸ ಮಾನೆ 59,985 ಮತಗಳನ್ನು ಪಡೆದರೆ ಬಿಜೆಪಿಯ ಶಿವರಾಜ್ ಸಜ್ಜನರ 52,922 ಮತಗಳನ್ನು ಪಡೆದಿದ್ದಾರೆ. ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಬೇಕಿದೆ.
ಶ್ರೀನಿವಾಸ ಮಾನೆ 7063 ಮತಗಳ ಮುನ್ನಡೆಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ತೊಡಗಿದ್ದಾರೆ.
ಬಿಜೆಪಿಯ ಶಾಸಕ ಸಿಎಂ ಉದಾಸಿ ಅವರ ಅಕಾಲಿಕ ನಿಧನದಿಂದಾಗಿ ಹಾನಗಲ್ ನಲ್ಲಿ ಬೈ ಎಲೆಕ್ಷನ್ ನಡೆದಿತ್ತು.









