Rahul Dravid : ಇದೇ ದ್ರಾವಿಡ್ ಅವರ ತಾಕತ್ತು
ಟೀಂ ಇಂಡಿಯಾದ ಹೆಡ್ ಕೋಚ್, ವಿಶ್ವ ಕ್ರಿಕೆಟ್ ನ ಬುದ್ಧ ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೆಕರ್ ಹಾಡಿ ಹೊಗಳಿದ್ದಾರೆ.
ಅತ್ಯಂತ ಬುದ್ಧಿಶಾಲಿ ಕ್ರಿಕೆಟಿಗರಲ್ಲಿ ದ್ರಾವಿಡ್ ಕೂಡ ಒಬ್ಬರು, ಅವರು ತುಂಬಾ ಸ್ಮಾರ್ಟ್ ಎಂದು ದ್ರಾವಿಡ್ ಅವರನ್ನ ಸಂಜಯ್ ಕೊಂಡಾಡಿದ್ದಾರೆ.
ರಾಹುಲ್ ದ್ರಾವಿಡ್ ಟಿಂ ಇಂಡಿಯಾದ ಅಂಡರ್ 19 ತಂಡದ ಕೋಚ್ ಆಗಿ ಇಶಾನ್ ಕಿಶಾನ್, ರಿಷಬ್ ಪಂತ್, ಪೃಥ್ವಿ ಶಾ, ಶುಬ್ ಮನ್ ಗಿಲ್ ನಂತಹ ಎಷ್ಟೋ ಆಟಗಾರರನ್ನು ಬೆಳಕಿಗೆ ತಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಅಂಡರ್ 19 ಗೆದ್ದುಕೊಂಡಿದೆ.
ಇದಾದ ಬಳಿಕ ಟೀಂ ಇಂಡಿಯಾದ ಹೆಡ್ ಕೋಚ್ ಆದ ಬಳಿಕ ರಾಹುಲ್ ದ್ರಾವಿಡ್, ರೋಹಿತ್ ನಾಯಕತ್ವದಲ್ಲಿ ಸತತ ಟಿ 20 ಸರಣಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಮುಂದೆ ಸಾಕಷ್ಟು ಐಸಿಸಿ ಟೂರ್ನಿಗಳಿದ್ದು, ರಾಹುಲ್ ಸಾಕಷ್ಟು ಹೋಂ ವರ್ಕ್ ಮಾಡುತ್ತಾರೆ ಎಂದು ಸಂಜಯ್ ಹೇಳಿದ್ದಾರೆ.
ಆಟಗಾರರ ಜೊತೆ ಸಮನ್ವಯ ಸಾಧಿಸುತ್ತಾ ತಂಡವನ್ನು ಗೆಲುವಿನತ್ತ ಮುನ್ನಡೆಸೋದು ರಾಹುಲ್ ದ್ರಾವಿಡ್ ಗೆ ಅತ್ಯಂತ ಸುಲಭದ ಕೆಲಸವಾಗಿದೆ. ದ್ರಾವಿಡ್ ಅತ್ಯಂತ ಬುದ್ಧಿವಂತ ಕ್ರಿಕೆಟಿಗ, ತುಂಬಾ ಸ್ಮಾರ್ಟ್.
ಜೂನಿಯರ್ ಹಂತದಲ್ಲಿ ಎಷ್ಟೋ ಮಂದಿ ಆಟಗಾರರನ್ನು ತಿದ್ದಿದ್ದ ಘನತೆ ಅವರದ್ದು. ಮುಖ್ಯವಾಗಿ ಯುವಕರಲ್ಲಿರುವ ಪ್ರತಿಭೆಯಲ್ಲಿ ಬೆಳಕಿಗೆ ತಂದು ಅವರು ಮಿಂಚುವಂತೆ ಪ್ರೋತ್ಸಾಹಿಸುತ್ತಾರೆ.

ಈ ಗುಣವೇ ದ್ರಾವಿಡ್ ಅವರ ಬಲವಾಗಿದೆ. ತನ್ನ ಪರಧಿಯಲ್ಲಿರುವ ಪ್ರತಿ ಅಂಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಅದ್ಭುತ ವಿಜಯಗಳನ್ನು ಸೃಷ್ಠಿಸುತ್ತಾರೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಇನ್ನು ಮೈದಾನದಲ್ಲಿ ರೂಪಿಸುವ ತಂತ್ರಗಳು ಮತ್ತು ಐಸಿಸಿ ಟೂರ್ನಿಗಳಲ್ಲಿ ಪ್ಲೇಯಿಂಗ್ ಇಲೆವನ್ ಆಯ್ಕೆಯಲ್ಲಿ ದ್ರಾವಿಡ್ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ದ್ರಾವಿಡ್ ಅವರನ್ನ ಸಂಜಯ್ ಹೊಗಳಿದ್ದಾರೆ..
ಇನ್ನು ದೆಹಲಿಯಲ್ಲಿ ನಡೆದ ಮೊದಲ ಟಿ 20 ಪಂದ್ಯದ ವಿಚಾರಕ್ಕೆ ಬಂದರೇ ಮೊದಲ ಪಂದ್ಯದಲ್ಲಿಯೇ ಭಾರತ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿ ಪಂದ್ಯದಲ್ಲಿ ಸೋಲು ಕಂಡಿದೆ. ಐದು ಪಂದ್ಯಗಳ ಟಿ 20 ಸರಣಿಯ ಭಾಗವಾಗಿ ದಕ್ಷಿಣ ಆಫ್ರಿಕಾ ಭಾರತದ ಪ್ರವಾಸಕ್ಕೆ ಬಂದಿದೆ.
ಅದರ ಅಂಗವಾಗಿ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಗುರುವಾರ ಮೊದಲ ಟಿ 20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಇಶಾನ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 211 ರನ್ ಕಲೆಹಾಕಿತ್ತು.
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಆರಂಭಿಕ ಆಘಾತ ಅನುಭವಿಸಿದ್ರೂ ನಾಲ್ಕನೇ ವಿಕೆಟ್ ಗೆ ಡೇವಿಡ್ ಮಿಲ್ಲರ್, ಡೆರ್ ಡು ಸನ್ ಜೋಡಿ ಭಾರತೀಯ ಬೌಲರ್ ಗಳ ಬೆಂಡೆತ್ತಿದ್ರು.
ಪರಿಣಾಮ 19.1 ಓವರ್ ಗಳಲ್ಲಿ 212 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ ತಂಡ 1-0 ಅಂತರದಲ್ಲಿ ಹಿನ್ನಡೆಯಲ್ಲಿದೆ.








