ಚಿಕ್ಕಮಗಳೂರು: ಸಚಿವ ಜಮೀರ್ ಅಹಮದ್ರನ್ನು (Zameer Ahmed) ಗಡಿಪಾರು ಮಾಡುವುದು ಬೇಡ, ಆಲದ ಮರಕ್ಕೆ ನೇಣು ಹಾಕಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ದತ್ತಮಾಲೆ ಅಭಿಯಾನದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಮೂಲಕ ರೈತರ ಆಸ್ತಿ ಕಿತ್ತುಕೊಳ್ಳುವ ಯತ್ನ ಮಾಡುತ್ತಿದ್ದಾನೆ. ಆತ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ. ಯಾರ ಭೂಮಿ, ಕಟ್ಟಡ ಬೇಕೋ ಅದನ್ನು ಪಡೆದು ನುಂಗಿ ನೀರು ಕುಡಿಯೋಕೆ, ಇದು ನಿಮ್ಮ ಅಪ್ಪಂದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾ ಮುಸ್ಲಿಂರಿದ್ದಾರೆ. ಅವರನ್ನು ಜಮೀರ್ ಸಾಕಿ, ಓಟರ್ ಲೀಸ್ಟ್ ತಯಾರು ಮಾಡಿದ್ದಾನೆ. ಹೀಗಾಗಿ ಆತನನ್ನು ಗಡಿಪಾರು ಮಾಡಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಆದರೆ, ಆತನನ್ನು ಕಿತ್ತಾಕೋದು ಬೇಡ. ಯಾವುದಾರೂ ಆಲದಮರಕ್ಕೆ ನೇಣು ಹಾಕಿ ಎಂದು ಕಿಡಿಕಾರಿದ್ದಾರೆ.