ಸಾಂಸ್ಕೃತಿಕ ನಗರಿಯಲ್ಲಿ ಹನುಮಜಯಂತಿ ಸಂಭ್ರಮ mysore saaksha tv
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನುಮ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.
ಮೈಸೂರು ಹನುಮಂತೋತ್ಸವ ಸಮಿತಿ ವತಿಯಿಂದ ಹನುಮ ಜಯಂತಿ ಆಚರಣೆ ಮಾಡಲಾಗಿದ್ದು, ಕೋಟೆ ಆಂಜನೇಯಸ್ವಾಮಿ ದೇವಾಲಯ ಸಂಪೂರ್ಣ ಕೇಸರಿ ಮಯವಾಗಿದೆ.
ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಮೇಯರ್ ಸುನಂದಾ ಪಾಲನೇತ್ರರಿಂದ ಹನುಮಜಯಂತಿಗೆ ಚಾಲನೆ ನೀಡಲಾಗಿದೆ.
ಶ್ರೀರಾಮ, ಸೀತಾಮಾತೆ ಹಾಗೂ ಹನುಮ ವೇಶದಲ್ಲಿ ಪುಟಾಣಿಗಳು ಮಿಂಚಿದ್ದಾರೆ.
ಹನುಮ ಮೂರ್ತಿ ಮೆರೆವಣಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಟ್ರ್ಯಾಕ್ಟರ್ ಮೂಲಕ ಆಗಮಿಸಿದ್ದರು.









