ಹ್ಯಾಪಿ ಬರ್ತ್ ಡೇ ಪ್ರಶಾಂತ್ ನೀಲ್
ಬೆಂಗಳೂರು: ಉಗ್ರಂ ಮೂಲಕ ಘರ್ಜಿಸಿ, ಕೆಜಿಎಫ್ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗು ನೋಡುವಂತೆ ಮಾಡಿದ ‘ಕರ್ನಾಟಕ ಪ್ರೈಡ್’ ಪ್ರಶಾಂತ್ ನೀಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಪ್ರಶಾಂತ್ ನೀಲ್ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದು, ನಿನ್ನೆ ರಾತ್ರಿಯೇ ಆಪ್ತರೊಂದಿಗೆ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಪತ್ನಿ ಲಲಿತಾ, ನಟ ಶ್ರೀ ಮುರುಳಿ, ರವಿ ಬಸ್ರೂರು ಮುಂತಾದವರ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಹ್ಯಾಪಿ ಬರ್ತ್ ಡೇ ಪ್ರಶಾಂತ್ ನೀಲ್ ಟ್ರೆಂಡಿಂಗ್
ಲಾಕ್ ಡೌನ್ ಹಿನ್ನೆಲೆ ಪ್ರಶಾಂತ್ ನೀಲ್ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿನ ಸಂಭ್ರಮಕ್ಕೆ ಮಾತ್ರ ಮಿತಿ ಇಲ್ಲದಂತಾಗಿದ್ದು, ಟ್ವಿಟ್ಟರ್ ನಲ್ಲಿ ಸಾವಿರಾರು ಜನ ಶುಭ ಕೋರುತ್ತಿದ್ದಾರೆ. ಈ ಮೂಲಕ ಹ್ಯಾಷ್ ಟ್ಯಾಗ್ ನೊಂದಿಗೆ ಹ್ಯಾಪಿ ಬರ್ತ್ ಡೇ ಪ್ರಶಾಂತ್ ನೀಲ್ ಎಂಬುದು ಟ್ರೆಂಡಿಂಗ್ ನಲ್ಲಿದೆ.
ಅಂದಹಾಗೆ ಪ್ರಶಾಂತ್ ನೀಲ್, ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದವರಲ್ಲ. ಆದ್ರೆ ಉಗ್ರಂ ಸಿನಿಮಾ ಮೂಲಕ ನಟ ಶ್ರೀ ಮುರುಳಿ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟರು. ಉಗ್ರಂ ಘರ್ಜನೆ ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಸೇರಿ ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾಗಳ ಮೂಲಕ ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.
ಮಾಡಿದ್ದು ಕೇವಲ ಎರಡೇ ಚಿತ್ರಗಳಾದರೂ ತಮ್ಮ ಖದರ್ ಚಿತ್ರಗಳ ಮೂಲಕವೇ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಪ್ರಶಾಂತ್ ನೀಲ್.
ಎರಡು ಸಿನಿಮಾಗಳಿಂದ 2 ಸೈಮಾ ಅವಾರ್ಡ್ಸ್, 1 ಫಿಲ್ಮ್ ಫೇರ್ ಅವಾರ್ಡ್ ಗಿಟ್ಟಿಸಿಕೊಂಡಿರುವ ಪ್ರಶಾಂತ್ ಸದ್ಯ ಕೆಜಿಎಫ್ – 2 ಚಿತ್ರದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.