ಪುನೀತ್ ಹುಟ್ಟು ಹಬ್ಬದಂದು ದುಖಃ ತೋಡಿಕೊಂಡ ನಟ ಶರತ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ 47ನೇ ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ರಾಜ್ಯದ 400 ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ರಾಜ್ಯದಾದ್ಯಂತ ಜೇಮ್ಸ್ ದಾಖಲೆಯ ಮಟ್ಟಕ್ಕೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಪುನೀತ್ ಹುಟ್ಟು ಹಬ್ಬ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು ಶುಭಕೋರಿದ್ದಾರೆ, ಜೇಮ್ಸ್ ಭರ್ಜರಿ ಯಶಸ್ಸು ಕಾಣಲಿ ಎಂದು ಚಿತ್ರರಂಗದ ದಿಗ್ಗಜರು ಟ್ವೀಟ್ ಮಾಡಿ ಶುಭಕೋರಿದ್ದಾರೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದಲ್ಲಿ ನಟಿಸಿರುವ ನಟ ಶರತ್ ಕುಮಾರ್ ಸರಣಿ ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ. ಮತ್ತು ದುಖಃ ವ್ಯಕ್ತ ಪಡಿಸಿದ್ದಾರೆ.
ನಾಳೆ ಅಪ್ಪುವವರ ಜನ್ಮದಿನ ಮತ್ತು ಜೇಮ್ಸ್ ಬಿಡುಗಡೆ. ನನಗೆ ಪದಗಳು ತೋಚುತ್ತಿಲ್ಲ. ನನ್ನ ಮನಸ್ಸು ಆಲೋಚನೆಗಳಿಗೆ ಸ್ತಬ್ಧವಾಗಿದೆ. ಬಿಡುಗಡೆಗಾಗಿ ಸಂತೋಷಪಡಬೇಕೆ ಅಥವಾ ಅವನ ಅಗಲಿಕೆಯಿಂದ ದುಃಖಿಸಬೇಕೆ ಎಂದು ನಾನು ಗೊಂದಲಕ್ಕೀಡಾಗಿದ್ದೇನೆ.
https://twitter.com/realsarathkumar/status/1504066471650988033?ref_src=twsrc%5Etfw%7Ctwcamp%5Etweetembed%7Ctwterm%5E1504066471650988033%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Fhappy-birthday-puneeth-rajkumar-mohanlal-to-sarathkumar-celebs-remember-power-star-on-birth-anniversary-1926317-2022-03-17
ಅಪ್ಪು ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಹೆಸರನ್ನು ಹೇಳಿದರೆ ನನ್ನ ಕಣ್ಣಲ್ಲಿ ನೀರು ಬರುತ್ತದೆ, ನಾನು ಮಾತನಾಡಲು ಮುಂದಾದಾಗ ಉಸಿರುಗಟ್ಟುತ್ತದೆ. ದುಃಖ ಮತ್ತು ಖಿನ್ನತೆ ಆವರಿಸುತ್ತದೆ. ನಾನು ಈ ಹಿಂದೆ ಅನೇಕ ಆತ್ಮೀಯರನ್ನು ಕಳೆದುಕೊಂಡಿದ್ದೇನೆ ಆದರೆ ನನ್ನ ಈ ಭಾವನೆ ವಿವರಿಸಲಾಗದು ನೀವು ನನ್ನ ಆಲೋಚನೆಗಳು ಮತ್ತು ನೆನಪುಗಳಲ್ಲಿ ಶಾಶ್ವತವಾಗಿ ಬದುಕುತ್ತೀರಿ.
https://twitter.com/realsarathkumar/status/1504066482157748227
ರಾಜ್ಕುಮಾರ ಮತ್ತು ಈಗ ಜೇಮ್ಸ್ನಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಿಮ್ಮ ಉಪಸ್ಥಿತಿಯು ಯಾವಾಗಲೂ ಆಯಸ್ಕಾಂತದಂತೆ ಎಳೆಯುತ್ತಿತ್ತು. ನೀವು ಮನೆಯಿಂದ ಜೇಮ್ಸ್ ಸೆಟ್ ಗೆ ಊಟ ತಂದದ್ದು ನೆನಪಾಗುತ್ತಿದೆ. ಎಂದು ನಟ ಶರತ್ ಕುಮಾರ್ ಸರಣಿ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ…
https://twitter.com/realsarathkumar/status/1504066494774190080








