ಹ್ಯಾಪಿ ಬರ್ತ್ ಡೇ ಸುರೇಶ್ ರೈನಾ…! Suresh Raina
ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಅವರಿಗೆ ಇಂದು 35ನೇ ಹುಟ್ಟು ಹಬ್ಬದ ಸಂಭ್ರಮ.
ಅಪ್ತ ಗೆಳೆಯ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೇಳಿದ ಕ್ಷಣದಲ್ಲೇ ತಾನು ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಕ್ರಿಕೆಟಿಗ ಸುರೇಶ್ ರೈನಾ.
ಇದೀಗ ಐಪಿಎಲ್ ನಲ್ಲಿ ಆಡುತ್ತಿರುವ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ಉಳಿದುಕೊಳ್ಳುತ್ತಾರೋ ಅನ್ನೋದು ಗೊತ್ತಿಲ್ಲ.
2020ರ ಐಪಿಎಲ್ ನಲ್ಲಿ ವೈಯಕ್ತಿಕ ಕಾರಣಗಳಿಂದ ಚೆನ್ನೈ ತಂಡದಿಂದ ಹೊರಬಂದಿದ್ದ ರೈನಾ, 2021ರಲ್ಲಿ ಚೆನ್ನೈ ತಂಡದ ಪರವೇ ಆಡಿದ್ದರು.
ಆದ್ರೆ ಸುರೇಶ್ ರೈನಾ ಹೆಚ್ಚು ಸದ್ದು ಮಾಡಿರಲಿಲ್ಲ.
ಅದ್ಭುತ ಫೀಲ್ಡರ್ ಆಗಿರುವ ಸುರೇಶ್ ರೈನಾ, ಪಾರ್ಟ್ ಟೈಮ್ ಬೌಲರ್ ಕೂಢ ಹೌದು. ಟೀಮ್ ಇಂಡಿಯಾ ಹಲವು ಗೆಲುವುಗಳಲ್ಲಿ ಸುರೇಶ್ ರೈನಾ ಪ್ರಮುಖ ಪಾತ್ರ ವಹಿಸಿದ್ದರು.
ಉತ್ತರ ಪ್ರದೇಶದ ಸುರೇಶ್ ರೈನಾ, ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು.
ಆ ನಂತರ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿದ್ದರು.
ಧೋನಿ ಕ್ರಿಕೆಟ್ ನಿಂದ ದೂರ ಸರಿದ ನಂತರ ರೈನಾ ಕೂಡ ಮಂಕಾಗಿದ್ದರು. ಹಾಗಂತ ಧೋನಿಯ ಬೆಂಬಲವಿದ್ರೂ ತನ್ನ ಅದ್ಭುತ ಪ್ರತಿಭೆ ಮತ್ತು ಸಾಮಥ್ರ್ಯದಿಂದಲೇ ಛಾಪು ಮೂಡಿಸಿದ್ದರು ಸುರೇಶ್ ರೈನಾ.
ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಅಮೋಘ ಆಟವನ್ನಾಡಿದ್ದ ರೈನಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಅವಕಾಶವೂ ಸಿಗಲಿಲ್ಲ. ಆದ್ರೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.
2006ರಲ್ಲಿ ಇಂಗ್ಲೆಂಡ್ ವಿರುದ್ಧ 89 ರನ್, 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 101, 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 34 ರನ್, 2014ರಲ್ಲಿ ಇಂಗ್ಲೆಂಡ್ ವಿರುದ್ಧ 100 ರನ್ ಸುರೇಶ್ ರೈನಾ ಅವರ ಬ್ಯಾಟಿಂಗ್ ಸಾಮಥ್ರ್ಯಕ್ಕೆ ಕೈಗನ್ನಡಿಯಾಗಿದೆ.
35ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸುರೇಶ್ ರೈನಾ ಅವರಿಗೆ ಕ್ರಿಕೆಟ್ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು, ಒಡನಾಡಿಗಳು ಶುಭ ಹಾರೈಸಿದ್ದಾರೆ.









