Har Ghar Tiranga | ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ತಿರಂಗಾ
ಬೆಳಗಾವಿ : ಇಂದಿನಿಂದ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ದೇಶದ ಅತಿ ಎತ್ತರದ ಬೆಳಗಾವಿಯ ಕೋಟೆ ಕೆರೆ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ಮಾಡಲಾಗಿದೆ.
ಧ್ವಜಾರೋಹಣಕ್ಕೂ ಮುನ್ನ ಧ್ವಜಸ್ತಂಭಕ್ಕೆ ಬಿಜೆಪಿ ಶಾಸಕ ಅನಿಲ್ ಬೆನಕೆ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿರುವ 110 ಮೀಟರ್ ಎತ್ತರದ ಧ್ವಜಸ್ತಂಭ ಇದಾಗಿದ್ದು, 75 ಕೆಜಿ ತೂಕದ ಧ್ವಜಾರೋಹಣ ಮಾಡಲಾಗಿದೆ.
ಬಟನ್ ಒತ್ತುವ ಮೂಲಕ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಸಾಬಣ್ಣ ತಳವಾರ್, ಡಿಸಿ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಭಾಗಿಯಾಗಿದ್ದರು.