ಒಳಹರಿವು ಹೆಚ್ಚಳ, ಹಾರಂಗಿ ಜಲಾಶಯದಿಂದ 1,752 ಕ್ಯೂಸೆಕ್ ನೀರು ಹೊರಕ್ಕೆ
ಕೊಡಗು : ಕಳೆದೆರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ 1,752 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.
ಜಲಾಶಯಕ್ಕೆ 4,864 ಕ್ಯೂಸೆಕ್ ನೀರಿನ ಒಳಹರಿವಿದ್ದು, ಶಾಸಕ ಅಪ್ಪಚ್ಚು ರಂಜನ್ ನಿರ್ದೇಶನದಂತೆ ಅಧಿಕಾರಿಗಳು ನೀರನ್ನು ಹೊರಗೆ ಬಿಟ್ಟಿದ್ದಾರೆ. ಕಳೆದ ವರ್ಷ ತಡವಾಗಿ ನೀರು ಹರಿಸಲಾಗಿತ್ತು. ಪರಿಣಾಮ ಕುಶಾಲನಗರ ಭಾಗದ ಹಲವು ಬಡಾವಣೆಗಳು ಮುಳುಗಡೆಯಾಗಿದ್ದವು. ಹಿಂದಿನ ಘಟನೆಗಳು ಮರುಕಳಿಸಬಾರದೆಂದು ಈ ಬಾರಿ ಬೇಗನೇ ನೀರನ್ನು ಹೊರಗೆ ಬಿಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ ಮಳೆ 60.32 ಮಿ.ಮೀ ಮಳೆ ಆಗಿದೆ. ಮಡಿಕೇರಿಯಲ್ಲಿ 79.55, ವಿರಾಜಪೇಟೆಯಲ್ಲಿ 59.07 ಹಾಗೂ ಸೋಮವಾರ ಪೇಟೆಯಲ್ಲಿ 42.35 ಮಿ.ಮೀ ಮಳೆ ಆಗಿದೆ.








