IPL 2022 : ಹಾರ್ದಿಕ್ ಟೀಂ ಇಂಡಿಯಾಗೆ ವಾಪಸ್ ಆಗೋದು ಪಕ್ಕಾ
ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಪ್ರಸಂಶೆಗಳ ಸುರಿಮಳೆ ಗೈದಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಮೂರು ಪಂದ್ಯಗಳನ್ನಾಡಿದ್ದು, ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯ ತಂಡವಾಗಿದೆ.
ಮುಖ್ಯವಾಗಿ ಹಾರ್ದಿಕ್ ಪಾಂಡ್ಯರ ನಾಯಕತ್ವ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.
ಈ ನಡುವೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡಿ, ”ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದು, ಅದೇ ರೀತಿ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ.
ಅದರಲ್ಲೂ ಹಾರ್ದಿಕ್ ಬೌಲಿಂಗ್ ಮಾಡುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಮತ್ತೊಂದೆಡೆ ಅವರ ಬೌಲಿಂಗ್ ಟೀಂ ಇಂಡಿಯಾಕ್ಕೂ ವರದಾನವಾಗಿದೆ. ಅವರು ಐಪಿಎಲ್ನಲ್ಲಿ ಮಿಂಚಿದರೆ ರಾಷ್ಟ್ರೀಯ ತಂಡಕ್ಕೆ ಮರಳಬಹುದು.
ವಾಸ್ತವವಾಗಿ ಹೇಳಬೇಕಾದ್ರೆ ಹಾರ್ದಿಕ್ ಭಾರತ ತಂಡಕ್ಕೆ ಮರಳುವ ಗುರಿ ಹೊಂದಿದ್ದಾರೆ. ಅವರು ನಿಯಮಿತವಾಗಿ ಬೌಲಿಂಗ್ ಮಾಡಲು ಸಾಧ್ಯವಾದರೆ ಅವರು ಖಂಡಿತವಾಗಿಯೂ ಭಾರತ ತಂಡಕ್ಕೆ ಬರುತ್ತಾರೆ.
ಏಕೆಂದರೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಸರಿಯಾದ ಆಲ್ರೌಂಡರ್ನ ಅಗತ್ಯವಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. harbhajan-singh-lauds-gt-skipper-hardik-pandya









