ಆಟದ ಕಡೆ ಗಮನಹರಿಸು… ನನಗನಿಸುತ್ತಿದೆ ನೀನು ಭಾರತ ಪರ ಆಡ್ತಿಯ.. ಸಚಿನ್ ಹೀಗೆ ಅಂದಿದ್ದು ಯಾರಿಗೆ…?
ನಾನು ನೆಟ್ಸ್ ನಲ್ಲಿ ಭಾರತ ತಂಡದ ಆಟಗಾರರಿಗೆ ಬೌಲಿಂಗ್ ಮಾಡುತ್ತಿದ್ದೆ. ಆಗ ಅಜೇಯ್ ಜಡೇಜಾ ಭಾಯ್, ನಾಯಕ ಅಜರುದ್ದೀನ್ ಅವರ ಬಳಿ ಹೇಳಿದ್ದು ಹೀಗೆ.. ಅಝು ಭಾಯ್, ಆ ಹುಡಗನನ್ನು ನೋಡಿ. ಅಂತ. ಅಜರುದ್ದೀನ್ ಕೂಡ ನನ್ನನ್ನೇ ನೋಡ್ತಾ ಇದ್ರು. ಪಕ್ಕದಲ್ಲೇ ಇದ್ದ ಸಚಿನ್ ತೆಂಡುಲ್ಕರ್ ಹೇಳಿದ್ದು ಇಷ್ಟೇ..ಆಟದ ಕಡೆಗೆ ಗಮನ ಹರಿಸು. ನೀನು ಭಾರತ ತಂಡದ ಪರ ಆಡುತ್ತಿಯ ಅಂತ ನನ್ನ ಆಶಾಭಾವನೆ. ಆಲ್ ದಿ ಬೆಸ್ಟ್.. ಆ ಒಂದು ಮಾತು ನನ್ನ ಬದುಕಿಗೆ ಹೊಸ ಹುಮ್ಮಸ್ಸನ್ನು ನೀಡಿತ್ತು. ಆ ಮಾತಿನ ಪ್ರೇರಣೆಯಿಂದಲೇ ನಾನು 100 ಪರ್ಸೆಂಟ್ ಅಲ್ಲ, 120 ಪರ್ಸೆಂಟ್ ಶ್ರಮ ಹಾಕಲು ಶುರು ಮಾಡಿದ್ದೆ. ಸಚಿನ್ ಅವರ ಮಾತಿನಂತೆ ಮುಂದೆ ನಾನು ಟೀಮ್ ಇಂಡಿಯಾಗೆ ಎಂಟ್ರಿಯಾದೆ.. ಹೀಗೆ ಸುಮಾರು 24 ವರ್ಷಗಳ ಹಿಂದೆ ಘಟನೆಯನ್ನು ನೆನಪು ಮಾಡಿಕೊಂಡ್ರು ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್.
ಅದು ಮೊಹಾಲಿ ಟೆಸ್ಟ್ ಪಂದ್ಯ. ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟಗಾರರು ನೆಟ್ಸ್ ಅಭ್ಯಾಸದಲ್ಲಿ ನಿರತರಾಗಿದ್ದರು. ಆಗ ನನಗೆ ಒಂದು ಕರೆ ಬಂದಿತ್ತು. ನೀನು ಇಲ್ಲಿಗೆ ಬಾ.. ನಿನ್ನನ್ನು ನೋಡಬೇಕು ಅಂತ. ಆಗ ನಾನು ಏನಾಯ್ತು ಅಂತ ಹೆದರಿಕೆಯಿಂದಲೇ ಅಲ್ಲಿಗೆ ಹೋದೆ. ಅಲ್ಲಿಗೆ ನಾನು ತಲುಪಿದಾಗ ನೆಟ್ಸ್ ಅಬ್ಯಾಸ ಬಹುತೇಕ ಮುಗಿದು ಹೋಗಿತ್ತು. ದೇಬಾಸಿಶ್ ಮೊಹಾಂತಿ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು. ಅಜರು ಭಾಯ್ ಮತ್ತು ಸಚಿನ್ ತೆಂಡುಲ್ಕರ್ ಅವರ ಬ್ಯಾಟಿಂಗ್ ಅಭ್ಯಾಸ ಮುಗಿದು ಹೋಗಿತ್ತು. ನನಗೆ ಇನ್ನೂ ನೆನಪಿದೆ. ಅಝ್ ಭಾಯ್ ಅವರು ಊಟ ಮಾಡುತ್ತಿದ್ದರು. ನಾನು ಅಲ್ಲಿಗೆ ಬಂದಾಗ ಓಹ್ಹ್.. ಇವನ್ನಿನ್ನು ಹುಡುಗ.. ಸ್ವಲ್ಪ ಹೊತ್ತು ಬೌಲಿಂಗ್ ಮಾಡು ಅಂತ ಹೇಳಿದ್ರು ಅಂತ ಆ ದಿನವನ್ನು ಮೆಲುಕು ಹಾಕಿಕೊಳ್ತಾರೆ ಹರ್ಭಜನ್ ಸಿಂಗ್.
ನಾನು ಬೌಲಿಂಗ್ ಮಾಡುತ್ತಿರುವಾಗ ನನ್ನ ಪಕ್ಕ ಸಚಿನ್
ತೆಂಡುಲ್ಕರ್ ಇದ್ರು. ಅವರು ಕೂಡ ಕೂಡ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ನಾನು ಏಳೆಂಟು ಎಸೆತಗಳನ್ನು ಮೊಹಾಂತಿ ಅವರಿಗೆ ಎಸೆದಿದ್ದೆ. ಅವರು ನಾಲ್ಕೈದು ಬಾರಿ ಔಟ್ ಕೂಡ ಆಗಿದ್ದರು. ಆಗ ನನಗೆ ಅನ್ನಿಸಿದ್ದು ಇದು ಮೊಹಾಂತಿ. ಸಚಿನ್ ತೆಂಡುಲ್ಕರ್ ಅಲ್ಲ ಅಂತ. ಅಷ್ಟರಲ್ಲಿ ಅಜೇಯ್ ಜಡೇಜಾ ನನ್ನನ್ನು ನೋಡಿದ್ರು. ಅವರು ಅಝು ಭಾಯ್, ಈ ಹುಡಗನನ್ನು ನೋಡಿ ಅಂತ ಹೇಳಿದ್ರು. ಆಗಲೇ ನನ್ನ ಬೌಲಿಂಗ್ ಅನ್ನು ಅಜರುದ್ದೀನ್ ಅವರು ನೊಡ್ತಾ ಇದ್ರು. ಪಕ್ಕದಲ್ಲೇ ಇದ್ದ ಸಚಿನ್, ಆಟದ ಕಡೆಗೆ ನಿನ್ನ ಗಮನವಿರಲಿ. ಮುಂದೆ ಭಾರತ ತಂಡಕ್ಕೆ ಆಡುತ್ತಿಯ ಎಂಬ ಆಶಾಭಾವನೆ ಇದೆ. ಆಲ್ ದಿ ಬೆಸ್ಟ್ ಅಂತ ಹೇಳಿದ್ರು.
ಸಚಿನ್ ಅವರ ಮಾತು ನನಗೆ ಪ್ರೇರಣೆಯಾಯ್ತು. ಯಾಕಂದ್ರೆ ನಾನು ಭಾರತ ತಂಡದ ಪರ ಆಡುವ ಅವಕಾಶ ಸಿಕ್ರೆ ನಾನು ಇನ್ನಷ್ಟು ಶ್ರಮ ಪಡಬೇಕು ಎಂಬುದು ನನಗೆ ಮನವರಿಕೆಯಾಯ್ತು. ಆದಾದ ಒಂದು ವರ್ಷದ ನಂತರ ನಾನು
ಭಾರತ ತಂಡಕ್ಕೆ ಆಯ್ಕೆಯಾದೆ. 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದೆ ಅಂತಾರೆ ಹರ್ಭಜನ್ ಸಿಂಗ್.
ಆ ನಂತರ ಭಜ್ಜಿ ಹಿಂತಿರುಗಿ ನೋಡಲೇ ಇಲ್ಲ. 2001ರ ಐತಿಹಾಸಿಕ ಕೊಲ್ಕತ್ತಾ ಟೆಸ್ಟ್ ಪಂದ್ಯ ಸೇರಿದಂತೆ, 2007ರ ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಆಡಿರುವ ಹರ್ಭಜನ್ ಸಿಂಗ್, 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಹಾಗೇ 417 ವಿಕೆಟ್‍ಗಳನ್ನು ಕಬಳಿಸಿದ್ದಾರೆ. 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ ಉರುಳಿಸಿದ್ದಾರೆ. 28 ಟಿ-ಟ್ವೆಂಟಿ ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.








