ಏಷ್ಯಾಕಪ್‌ನಲ್ಲಿ ಸೆಪ್ಟೆಂಬರ್ 14ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (ಭಜ್ಜಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕೆ ನಾವು ಇಷ್ಟು ಆದ್ಯತೆ ಯಾಕೆ ನೀಡಬೇಕು? ಗಡಿಯಲ್ಲಿರುವ ನಮ್ಮ ಯೋಧರು ಹಲವು ಬಾರಿ ಹುತಾತ್ಮರಾಗುತ್ತಾರೆ. ಅನೇಕ ಬಾರಿ ಅವರಿಗೆ ತಮ್ಮ ಮನೆಗೆ ಹೋಗಲು ಕೂಡ ಅವಕಾಶ ಸಿಗುವುದಿಲ್ಲ. ಅವರು ನಮ್ಮೆಲ್ಲರಿಗಾಗಿ ದೊಡ್ಡ ತ್ಯಾಗ ಮಾಡುತ್ತಾರೆ. ಹೀಗಾಗಿ ನಮಗೆ ಒಂದು ಮ್ಯಾಚ್ ಬಿಡಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಹರ್ಭಜನ್ ಅವರ ಈ ಹೇಳಿಕೆ, ಕ್ರಿಕೆಟ್ ಮತ್ತು ರಾಷ್ಟ್ರಭಾವನೆ ಕುರಿತ ಚರ್ಚೆಗೆ ಮತ್ತೆ ನಾಂದಿ ಹಾಡಿದೆ.








