ಚೀನಾ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹರ್ಭಜನ್ ಸಿಂಗ್ ಪ್ರತಿಜ್ಞೆ
ಪಂಜಾಬ್, ಜೂನ್ 20: ಭಾರತೀಯ ಸೇನೆಯ ಮೇಲೆ ಚೀನಾ ನಡೆಸಿದ ದಾಳಿಯ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಚೀನಾ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಹರ್ಭಜನ್ ಸಿಂಗ್ ನಾನು ಯಾವುದೇ ಚೀನಾ ವಸ್ತುಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ ಯಾವುದೇ ಚೀನಾ ವಸ್ತುಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಭಾರತದ ಸೆಲೆಬ್ರೆಟಿಗಳು ಚೀನಾದ ಹಲವು ವಸ್ತುಗಳ ಜಾಹೀರಾತು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು, ಚೀನಾ ವಸ್ತುಗಳ ಪ್ರಚಾರ ಮಾಡುತ್ತಿದ್ದಾರೆ. ಆದರೆ ಹರ್ಭಜನ್ ಸಿಂಗ್ ಚೀನಾ ಭಾರತದ ಸೈನಿಕರ ಮೇಲೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಯಾವುದೇ ಚೀನಾ ವಸ್ತುಗಳ ಪ್ರಚಾರ ಅಥವಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಭಾರತೀಯ ಸೇನೆಯಲ್ಲಿರುವ ನಮ್ಮ ಸಹೋದರ ಮೇಲೆ ದಾಳಿ ಮಾಡಿದ ಚೀನಾದ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸಬೇಕು. ನಮ್ಮ ಹಣದಿಂದ ನಮ್ಮ ಮೇಲೆ ದಾಳಿ ಮಾಡುವ ಚೀನಾ ದೇಶದ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸಬೇಕು. ಭಾರತಕ್ಕೆ ಎಲ್ಲಾ ವಸ್ತುಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ನಮಗೆ ಚೀನಿ ವಸ್ತುಗಳ ಅಗತ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಚೀನಿ ವಸ್ತುಗಳಿಗೆ ಗುಡ್ ಬೈ ಹೇಳಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಐಪಿಎಲ್ ಟೂರ್ನಿಗೆ ಕೂಡ ನಮಗೆ ಯಾವುದೇ ಚೀನಾ ಕಂಪೆನಿಯ ಪ್ರಾಯೋಜಕತ್ವ ಬೇಕಾಗಿಲ್ಲ. ಎಲ್ಲಾ ಬ್ರ್ಯಾಂಡ್‌ಗಿಂತ ಐಪಿಎಲ್ ಬೆಳೆದು ನಿಂತಿದ್ದು, ಚೀನಾ ಸೇವೆಯ ಅಗತ್ಯವಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.