ಚಂಡೀಗಢ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಆದೇಶವನ್ನು ಹೊರಡಿಸಿದೆ. 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ವಿಚಾರವಾಗಿ ಕೆಲವರು ತಮ್ಮದೇ ಆದ ವಾದವನ್ನು ಮಂಡಿಸುತ್ತಿದ್ದಾರೆ. ಏಕಾಏಕಿ ಈ ರೀತಿ ಲಾಕ್ ಡೌನ್ ಮಾಡಬಾರದಿತ್ತು, ಇದರಿಂದ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಸೇರ್ಪಡೆಗೊಂಡಿದ್ದು, ಲಾಕ್ ಡೌನ್ ವಿಚಾರವಾಗಿ ಸರ್ಕಾರದ ಗಮನ ಸೆಳೆದಿದ್ದಾರೆ.
ಕೇಂದ್ರಸರ್ಕಾರ 21 ದಿನಗಳು ಇಡೀ ದೇಶವನ್ನೇ ಸ್ತಬ್ಧಗೊಳಿಸುವ ನಿರ್ಧಾರ ಮಾಡುವ ಮುನ್ನ ವಲಸಿಗ ಕಾರ್ಮಿಕರ ಬಗ್ಗೆ ಸರಿಯಾಗಿ ಯೋಚಿಸಲಿಲ್ಲ. ಅದರ ಕ್ರಮದಿಂದ ವಲಸಿಗ ದಿನಗೂಲಿಗಳು ಅತಂತ್ರರಾಗಿದ್ದಾರೆ. ಅವರಿಗೆ ಊಟ ಸಿಗುತ್ತಿಲ್ಲ. ವಾಪಸ್ ಹೋಗಿ ತಮ್ಮ ಕುಟುಂಬವನ್ನು ಸೇರಿಕೊಳ್ಳಲೂ ಆಗುತ್ತಿಲ್ಲ ಎಂದು ಹರ್ಭಜನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಹರ್ಭಜನ್ ಸಿಂಗ್ ವೀಕ್ಷಕ ವಿವರಣೆಗಾರನಾಗಿ ಮಿಂಚುತ್ತಿದ್ದಾರೆ. ಐಪಿಎಲ್ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ.