Hardik Pandya | ಅದ್ಭುತ ಇನ್ನಿಂಗ್ಸ್ ಆಡಿ ಕೆಟ್ಟ ದಾಖಲೆ ಬರೆದ ಪಾಂಡ್ಯ
ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಆಟ ಮುಗಿದಿದೆ. ಅಡಿಲೈಡ್ ವೇದಿಕೆಯಾಗಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾ ಸೋಲುಂಡಿದೆ.
ಈ ಮ್ಯಾಚ್ ನಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಒಂದು ಕೆಟ್ಟ ದಾಖಲೆಯನ್ನು ಬರೆದಿದ್ದಾರೆ. ಭಾರತ ಇನ್ನಿಂಗ್ಸ್ ನ ಕೊನೆಯ ಎಸೆತದಲ್ಲಿ ಹಾರ್ದಿಕ್ ಹಿಟ್ ವಿಕೆಟ್ ಆದರು.
ಇದರೊಂದಿಗೆ ಟಿ 20 ವಿಶ್ವಕಪ್ ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಆದ ಮೊದಲ ಭಾರತೀಯ ಕ್ರಿಕೆಟರ್ ಆಗಿದ್ದಾರೆ.
ಒಟ್ಟಾರೆ ಟಿ 20 ವಿಶ್ವಕಪ್ ನಲ್ಲಿ ಈ ಕೆಟ್ಟ ದಾಖಲೆ ನಿರ್ಮಿಸಿದ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ.

ಇದಕ್ಕೂ ಮೊದಲು 2007ರ ಟಿ 20 ವಿಶ್ವಕಪ್ ನಲ್ಲಿ ಕಿನ್ಯಾ ಕ್ರಿಕೆಟರ್ ಡೆವಿಡ್ ಒಬುಯಾ, 2021 ಚುಟುಕು ವಿಶ್ವಕಪ್ ನಲ್ಲಿ ನಸೀಂ ಅಹ್ಮದ್ ಹಿಟ್ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡಿದ್ದರು.
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಇನ್ನಿಂಗ್ಸ್ ಆಡಿದರು. 33 ಎಸೆತಗಳನ್ನು ಎದುರಿಸಿದ ಪಾಂಡ್ಯ, ನಾಲ್ಕು ಬೌಂಡರಿ, ಐದು ಸಿಕ್ಸರ್ ಗಳೊಂದಿಗೆ 63 ರನ್ ಗಳನ್ನು ಸಾಧಿಸಿದರು.








