ಇಂಜುರಿಯಿಂದ ಟೀಂ ಇಂಡಿಯಾದಿಂದ ಕಳೆದ ಐದು ತಿಂಗಳಿನಿಂದ ಹೊರಗುಳಿದಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಗ್ರೇಟ್ ಕಂಬ್ಯಾಕ್ ಮಾಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ನಾನು ಫಿಟ್ ಎಂದು ಬ್ಯಾಟ್ ಮೂಲಕ ಹೇಳಿದ್ದಾರೆ. ಡಿವೈ ಪಾಟಿಲ್ ಟಿ-20 ಕಪ್ ಕ್ರಿಕೆಟ್ ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ, ಇಂದಿನ ಪಂದ್ಯದಲ್ಲಿ ವಿಧ್ವಂಸಕ ಬ್ಯಾಟಿಂಗ್ ಮಾಡಿದ್ದಾರೆ. ಕೇವಲ 39 ಎಸೆತದಲ್ಲಿ ತನ್ನ ಶತಕ ಪೂರೈಸಿದ ಪಾಂಡ್ಯ, ಒಟ್ಟು 55 ಎಸೆತಗಳಲ್ಲಿ ಅಜೇಯ 158 ರನ್ ಚಚ್ಚಿದರು. ಹಾರ್ದಿಕ್ ಈ ಪಂದ್ಯದಲ್ಲಿ ಬರೋಬ್ಬರಿ 20 ಸಿಕ್ಸರ್ ಸಿಡಿಸಿದರೆ ಬೌಂಡರಿ ಬಂದಿದ್ದು ಆರು. ಪಾಂಡ್ಯ ಸಿಡಿಸಿದ 158 ರನ್ ಟಿ-20 ಕ್ರಿಕೆಟ್ ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಗರಿಷ್ಠ ರನ್ ಆಗಿದೆ.
ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...








