ರಾಹುಲ್ ಅಲ್ಲ.. ಪಂತ್ ಅಲ್ಲ.. ಈತನೇ ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್..!!
ಟೀಂ ಇಂಡಿಯಾದ ಮುಂದಿನ ಕ್ಯಾಪ್ಟರ್ ಯಾರು ಎಂಬ ಚರ್ಚೆ ಬಗ್ಗೆ ಬೆಂಗಾಲ್ ಕ್ರೀಡಾ ಮಂತ್ರಿ, ಮಾಜಿ ಟೀಂ ಇಂಡಿಯಾದ ಕ್ರಿಕೆಟರ್ ಮನೋಜ್ ತಿವಾರಿ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕರಾಗು ಅವಕಾಶ ಹಾರ್ದಿಕ್ ಪಾಂಡ್ಯ ಅವರಿಗೆ ಮಾತ್ರ ಇದೆ ಎಂದಿದ್ದಾರೆ.
ಪ್ರಸ್ತುತ ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿರುವ ರಾಹುಲ್ ಆಗಲಿ, ಭವಿಷ್ಯದ ನಾಯಕರೆಂದೇ ಬಿಂಬಿಸಲಾಗುತ್ತಿರುವ ರಿಷಬ್ ಪಂತ್ ಗೆ ಕ್ಯಾಪ್ಟನ್ಸಿ ಪಟ್ಟ ಸಿಗುವ ಯಾವುದೇ ಅವಕಾಶವಿಲ್ಲ. ಐಪಿಎಲ್ ನಲ್ಲಿ ನಾಯಕರಾಗಿ ಅಲ್ಲದೇ ಆಟಗಾಟಗಾರನಾಗಿಯೂ ಹಾರ್ದಿಕ್ ಮಿಂಚುತ್ತಿದ್ದಾರೆ. ಹೀಗಾಗಿ ಅವರಿಗೆ ಟೀಂ ಇಂಡಿಯಾದ ನಾಯಕರಾಗುವ ಅವಕಾಶವಿದೆ.
ಹಾರ್ದಿಕ್ ಪಾಂಡ್ಯ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ್ದಾರೆ. 87 ರನ್ ಗಳ ಜೊತೆಗೆ ಒಂದು ವಿಕೆಟ್ ಪಡೆದರು. ಹೀಗಾಗಿ ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮನೋಜ್ ತಿವಾರಿ, ರೋಹಿತ್ ಶರ್ಮಾ ಬಳಿಕ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ನಾಯಕರಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಅಂದಹಾಗೆ ಹಾರ್ದಿಕ್ ಪಂದ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಉತ್ತಮವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೈಟಾನ್ಸ್ ಐದು ಪಂದ್ಯಗಳನ್ನಾಡಿದ್ದು, ನಾಲ್ಕರಲ್ಲಿ ಗೆಲುವು ಸಾಧಿಸಿದೆ. hardik-pandya-will-be-team-india-future-captain









