ವರನಟ ಡಾ. ರಾಜ್ ಕುಮಾರ್ ಗೆ ಅವಮಾನ : ನಾಲಿಗೆ ಹರಿಬಿಟ್ಟ ಶಾಸಕ ಹ್ಯಾರಿಸ್
ಬೆಂಗಳೂರು: ರಾಜ್ಕುಮಾರ್ ಅವ್ರ ದೊಮ್ಮಲೂರು ಭಾಗದಲ್ಲಿರುವ ಅಣ್ಣಾವ್ರ ಸ್ಟ್ಯಾಚೂ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಶಾಸಕ ಹ್ಯಾರಿಸ್ ಮತ್ತೆ ಅಣ್ಣವ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾದ ವಿಡಿಯೋ ಹರಿದಾಡ್ತಿದ್ದು, ಡಾ. ರಾಜ್ಕುಮಾರ್ ಅವ್ರ ಬಗ್ಗೆ ಹ್ಯಾರಿಸ್ ನಾಲಿಗೆ ಹರಿಬಿಟ್ಟಿರುವುದು ಸ್ಪಷ್ಟವಾಗಿದೆ. ವಿಡಿಯೋದಲ್ಲಿ ಅವರ್ಯಾರೋ ರಾಜ್ಕುಮಾರ್ ಗೆ ಅಂತಾ ಮಾಡಿರ್ತಾರೆ. ಸ್ಟ್ಯಾಚೂ ಇಡೋದೆ ದೊಡ್ಡದು, ಪ್ರೋಟೆಕ್ಷನ್ ಬೇರೆ ಕೊಡೋದಕ್ಕೆ ಆಗುತ್ತಾ. ರಾಜ್ಕುಮಾರ್ ಪ್ರತೀಮೆಗೇನು ಪ್ರೊಟೆಕ್ಷನ್ ಬೇಕಾಗಿಲ್ಲ. ಭದ್ರತೆ ಬೇಕು ಅಂದ್ರೆ ರಸ್ತೆಲಿ ಯಾಕೆ ಪ್ರತಿಮೆ ಇಡ್ಬೇಕು ಮನೆಯಲ್ಲಿ ಇಟ್ಟುಕೊಳ್ಳಲಿ ಅಲ್ವಾ ಎಂದು ಹ್ಯಾರಿಸ್ ಹೇಳಿಕೆ ನೀಡಿದ್ದಾರೆ.
ಪೋಲಿಪುಂಡರಿಂದ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ : ಹೆಚ್.ಕೆ.ಕುಮಾರಸ್ವಾಮಿ
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಹ್ಯಾರಿಸ್, ನಾನು ದೊಮ್ಮಲೂರು ಭಾಗದಲ್ಲಿ ನಡೆಯುತ್ತಿರೋ ಸ್ಟ್ಯಾಚೂ ಕಾಮಕಾರಿಯನ್ನ ನೋಡೋಕಷ್ಟೇ ಹೋಗಿದ್ದೆ. ಪ್ರತಿಮೆ ಮೇಲೆ ಫುಲ್ ಕವರ್ ಮಾಡಿದ್ದಾರೆ. ಅದನ್ನ ಯಾಕೆ ಮಾಡಿದ್ದೀರಿ, ತೆಗೆದಿದ್ರೆ ಚನ್ನಾಗಿರ್ತಿತ್ತು ಅಂತಾ ಅಷ್ಟೇ ಹೇಳಿದ್ದು. ಯಾರೋ ಬೇರೆ ಎಲ್ಲೋ ಮಾತನಾಡಿದ್ದ ಧ್ವನಿಯನ್ನ ತೆಗೆದು ಇಲ್ಲಿಗೆ ಕಾಪಿ ಪೇಸ್ಟ್ ಮಾಡಿದ್ದಾರೆ. ನನಗೆ ರಾಜ್ಕುಮಾರ್ ಅವ್ರ ಬಗ್ಗೆ ಅಪಾರ ಗೌರವಿದೆ. ಅವ್ರ ಬಗ್ಗೆ ಈ ರೀತಿ ಮಾತನಾಡೋದಕ್ಕೆ ಆಗುತ್ತಾ ಎಂದಿದ್ದಾರೆ. ಬಳಿಕ ಸಾಮಾಜೀಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ಹಾಕಿ, ರಾಜ್ ಕುಮಾರ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.








