Virat Kohli | ಆಲ್ ಟೈಂ ಟಿ 20 ವರ್ಲ್ಡ್ ಕಪ್ ತಂಡದಲ್ಲಿ ವಿರಾಟ್ ಗೆ ಸ್ಥಾನ
ಟಿ 20 ವಿಶ್ವಕಪ್ 2022 ಸೂಪರ್ 12ರ ಸಮರಕ್ಕೆ ಕೆಲವೇ ಘಂಟೆಗಳು ಮಾತ್ರ ಬಾಕಿ ಉಳಿದಿವೆ.
ಮೊದಲ ಮ್ಯಾಚ್ ಸಿಡ್ನಿ ವೇದಿಕೆಯಾಗಿ ಆಸ್ಟ್ರೇಲಿಯಾ – ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪ್ರಮುಖ ಪಂದ್ಯಕ್ಕೂ ಹರ್ಷ ಭೋಗ್ಲೆ ತನ್ನ ಆಲ್ ಟೈಂ ಗ್ರೇಟೆಸ್ಟ್ ಟಿ 20 ವರ್ಲ್ಡ್ ಕಪ್ ಪ್ಲೇಯಿಂಗ್ ಎಲೆವೆನ್ ಆಯ್ಕೆ ಮಾಡಿದ್ದಾರೆ.
ಹರ್ಷ ಭೋಗ್ಲೆ ತಂಡದಲ್ಲಿ ಟೀಂ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಮಾತ್ರ ಅವಕಾಶ ಸಿಕ್ಕಿದೆ.
ಇನ್ನು ಈ ತಂಡದಲ್ಲಿ ಆರಂಭಿಕರಾಗಿ ವೆಸ್ಟ್ ಇಂಡೀಸ್ ತಂಡದ ಬ್ಯಾಟರ್ ಕ್ರಿಸ್ ಗೇಲ್, ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಜೋಸ್ ಬಟ್ಲರ್ ಇದ್ದಾರೆ.
ಅದೇ ರೀತಿ ಮೂರು, ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಕೆವಿನ್ ಪೀಟರ್ ಸನ್ ಗೆ ಸ್ಥಾನ ದಕ್ಕಿದೆ.
ಐದನೇ ಸ್ಥಾನದಲ್ಲಿ ಆಸೀಸ್ ದಿಗ್ಗಜ ಮೈಖಲ್ ಹಸ್ಸಿಗೆ ಅವಕಾಶ ನೀಡಲಾಗಿದೆ.
ಇನ್ನು ಆಲ್ ರೌಂಡರ್ ಕೋಟಾದಲ್ಲಿ ಆಸ್ಟ್ರೇಲಿಯಾದ ಶೇನ್ ವಾಟ್ಸನ್, ಪಾಕಿಸ್ಥಾನ್ ಮಾಜಿ ಆಲ್ ರೌಂಡರ್ ಷಾಹಿದ್ ಅಫ್ರಿದಿಗೆ ಭೋಗ್ಲೆ ಚಾನ್ಸ್ ಕೊಟ್ಟಿದ್ದಾರೆ.
ಇನ್ನು ಬೌಲರ್ ಗಳ ವಿಭಾಗದಲ್ಲಿ ಟ್ರೆಂಟ್ ಬೋಲ್ಟ್, ಲಸಿತ್ ಮಲಿಂಗ್, ಶಾಮ್ಯೂಲ್ ಬದ್ರಿಗೆ ಅವಕಾಶ ನೀಡಲಾಗಿದೆ.