T20 World Cup: ಫಿಟ್ನೆಸ್ ಪರೀಕ್ಷೆಯಲ್ಲಿ ಬುಮ್ರಾ , ಹರ್ಷಲ್ ಪಟೇಲ್ ಪಾಸ್..
ಭಾರತ ಕ್ರಿಕೆಟ್ ತಂಡಕ್ಕೆ ಇಬ್ಬರು ಬಲಿಷ್ಟ ವೇಗಿಗಳು ಕಂಬ್ಯಾಕ್ ಮಾಡಲಿದ್ದಾರೆ. ಗಾಯದ ಕಾರಣದಿಂದ ಏಷ್ಯಾ ಕಪ್ ನಿಂದ ಹೊರಗುಳಿದಿದ್ದ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್ನೆಸ್ ಪರಿಕ್ಷೆಯಲ್ಲಿ ಪಾಸಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೆಪ್ಟೆಂಬರ್ 15 ಅಥವಾ 16 ರಂದು ಮುಂಬರುವ T20 ವಿಶ್ವಕಪ್‌ಗೆ ಭಾರತೀಯ ತಂಡವನ್ನ ಆಯ್ಕೆ ಮಾಡುವ ನಿರೀಕ್ಷೆಯಿದೆ. ಏಷ್ಯಾ ಕಪ್ ಟೂರ್ನಿಯ ಕಳೆಪ ಪ್ರದರ್ಶನದ ನಂತರ ಟಿ20 ಮತ್ತು ಆಸ್ಟ್ರೇಲಿಯಾ ಸರಣಿಗಿ ಅಳೆದು ತೂಗಿ ತಂಡವನ್ನ ಆಯ್ಕೆ ಮಾಡಲಿದೆ.
ಇದಕ್ಕೂ ಮೊದಲು ಆಯ್ಕೆದಾರು ಮತ್ತು ಟೀಮ್ ಮ್ಯಾನೆಂಜ್ಮೆಂಟ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರ ಫಿಟ್ನೆಸ್ ತಪಾಸಣೆ ನಡಸಿದ್ದು, ಇಬ್ಬರೂ ವೇಗಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶನಿವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇಬ್ಬರಿಗೂ ಫಿಟ್‌ನೆಸ್ ಪರೀಕ್ಷೆ ನಡೆಸಲಾಯಿತು. ಈಗವರು ಟಿ20 ವಿಶ್ವಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಆದರೂ ಕೂಡ ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬುಮ್ರಾ ಮತ್ತು ಹರ್ಷಲ್ ಅವರ ಪ್ರಗತಿಯನ್ನ ಆಯ್ಕೆಗಾರರು ಮೇಲ್ವಿಚಾರಣೆ ಮಾಡಲಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡುವ ಸಾಧ್ಯತೆ ಇದ್ದು, ಆಯ್ಕೆದಾರರು ಶಮಿಯನ್ನ ಭಾರತ ತಂಡಕ್ಕೆ ವಾಪಸ್ ಕರೆಸಿಕೊಳ್ಳಲು ಪರಿಗಣಿಸುತ್ತಿದ್ದಾರೆ.