Harshal Patel | ಹರ್ಷಲ್ ಪಟೇಲ್ Harshal Patel ಅವರ ಆಲ್ ಟೈಂ ಬೆಸ್ಟ್ ಕ್ಯಾಪ್ಟನ್ Favourite Captain ಯಾರು ಗೊತ್ತಾ..?
ಬಹು ನಿರೀಕ್ಷಿತ IPL-2022 ಮೆಗಾ ಹರಾಜು ಇದೇ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ವರ್ಷದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದರು. ಹೀಗಿದ್ದರೂ ಆರ್ ಸಿಬಿ ಪ್ರಾಂಚೈಸಿ ಅವರನ್ನು ರಿಟೈನ್ಡ್ ಮಾಡಿಕೊಳ್ಳಲಿಲ್ಲ. ಕೇವಲ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿದೆ.
ಹೀಗಾಗಿ ಮುಂಬರುವ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ ಗಾಗಿ ಐಪಿಎಲ್ ಫ್ರಾಂಚೈಸಿಗಳು ಮುಗಿ ಬೀಳಲಿವೆ.
ಈ ಮಧ್ಯೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಹರ್ಷಲ್ ಪಟೇಲ್, ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಎಂ.ಎಸ್.ಧೋನಿ ಅವರನ್ನು ತಮ್ಮ ಆಲ್ ಟೈಂ ಫೇವರೇಟ್ ನಾಯಕ ಎಂದಿದ್ದಾರೆ. Harshal Patel Picks MS Dhoni as His Favourite Captain
ಹರ್ಷಲ್ ಪಟೇಲ್ 32 ವಿಕೆಟ್‌ಗಳೊಂದಿಗೆ ಐಪಿಎಲ್-2021 ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು.









