ಭೋಜ್ ಪುರಿಯಲ್ಲಿ ‘ಹರ್ಷಿಕಾ’ : ಟ್ವೀಟ್ ನಲ್ಲಿ ಪೂಣಚ್ಚ ಕೇಳಿಕೊಂಡಿದ್ದೇನು..!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹರ್ಷಿಕಾ ಪೂಣಚ್ಚ ಹೇಳಿಕೊಳ್ಳುವಂತಹ ಹೆಸರೇನು ಮಾಡಿಕೊಳ್ಳಲು ಆಗಲಿಲ್ಲ. ಸಿನಿಮಾಗಳ ಆಫರ್ ಗಳು ಸಹ ಅಷ್ಟಾಗಿ ಸಿಗುತ್ತಿಲ್ಲ. ಅಷ್ಟೇ ಅಲ್ಲ ತೆಲುಗು, ಕೊಡವ, ಮಲಯಾಳಂ, ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದ್ರೆ ಯಾವುದೂ ಅಷ್ಟಾಗಿ ಸಕ್ಸಸ್ ಕಾಣಲಿಲ್ಲ. ಕನ್ನಡದಲ್ಲಿ ಒಂದು ರೀತಿಯಲ್ಲಿ ಫಾರ್ಮ್ ನಿಂದ ಹೊರಗಡೆ ಉಳಿದಿರುವ ಹರ್ಷಿಕಾ ಇದೀಗ ಭೋಜ್ ಪುರಿಯತ್ತ ಮುಖ ಮಾಡಿದ್ದಾರೆ. ಹೌದು ಭೋಜ್ಪುರಿ ಸೂಪರ್ ಸ್ಟಾರ್ ಪವನ್ ಸಿಂಗ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಮಾಹಿತಿ ನೀಡಿರುವ ಹರ್ಷಿಕಾ ನಿಮ್ಮ ಆಶೀರ್ವಾದದ ಬೇಕೆಂದು ಕೇಳಿಕೊಂಡಿದ್ದಾರೆ.
“ತಲೈವಾ” ಗೆ ಬರ್ತ್ ಡೇ ಸಂಭ್ರಮ : ಕಂಡಕ್ಟರ್ ನಿಂದ ಸೂಪರ್ ಸ್ಟಾರ್ ವರೆಗಿನ ಜರ್ನಿ..!
ಟ್ವಿಟ್ಟರ್ ನಲ್ಲಿ ಭೋಜ್ಪುರಿ ನಟ ಪವನ್ ಸಿಂಗ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿ ”ಭೋಜ್ಪುರಿ ಸಿನಿಮಾ ಆರಂಭಿಸುತ್ತಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ಬೇಕು” ಎಂದಿದ್ದಾರೆ. ಹರ್ಷಿಕಾ ಪೂಣಚ್ಚಗೆ ಅಭಿಮಾನಿಗಳು ಶುಭ ಹಾರೈಸ್ತಿದ್ದಾರೆ.
ಈ ಚಿತ್ರದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಇನ್ನು ಹೆಸರಿಟ್ಟಿಲ್ಲ. ಶೇಕಡಾ 50 ರಷ್ಟು ಶೂಟಿಂಗ್ ಮಾಡಲಾಗಿತ್ತು. ಇನ್ನೂ ವಿಶೇಷ ಅಂದ್ರೆ ಚಿತ್ರದ ಬಹುತೇಕ ಶೂಟಿಂಗ್ ಲಂಡನ್ನಲ್ಲಿ ನಡೆದಿದೆ. ಉಳಿದ ಚಿತ್ರೀಕರಣವೂ ಅಲ್ಲಿಯೇ ನಡೆಯಲಿದೆ ಎನ್ನಲಾಗಿದೆ. ಚಿತ್ರಕ್ಕೆ ಪ್ರೇಮಾಂಶು ಸಿಂಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾವ ಯಾಶಿ ಪ್ರೊಡಕ್ಷನ್ನಲ್ಲಿ ಮೂಡಿಬರುತ್ತಿದ್ದು, ಅಭಯ್ ಸಿನ್ಹಾ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಮೂಲಕ ಅಧಿಕೃತವಾಗಿ ಹರ್ಷಿಕಾ ಭೋಜ್ ಪುರಿ ಸಿನಿಮಾರಂಗದಲ್ಲಿ ಪ್ರವೇಶ ಮಾಡಿದ್ದು, ಮೊದಲ ಭೋಜ್ ಪುರಿ ಸಿನಿಮಾವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








