ಅಕ್ಟೋಬರ್ 13 ರಿಂದ ವಿಶ್ವ ವಿಖ್ಯಾತ ಹಾಸನಾಂಭ ದೇವಸ್ಥಾನದ ದರ್ಶನ…
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದರ್ಶನ ಈ ಭಾರಿ ಅಕ್ಟೋಬರ್ 13ರಿಂದ 27ರವರೆಗೆ ಭಕ್ತರಿಗೆ ದೊರೆಯಲಿದೆ. ಕೋವಿಡ್ ಕಾರಣದಿಂದ ಎರಡು ವರ್ಷ ಕಳೆಗುಂದಿದ್ದ ಹಾಸನಾಂಬ ಜಾತ್ರಾ ಮಹೋತ್ಸವವನನ್ನ ಈ ಭಾರಿ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪೂರ್ವ ತಯಾರಿ ಕುರಿತು ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಅರ್ಚನಾ ಹಾಗೂ ಎಸ್ಪಿ ಹರಿರಾಂ ಶಂಕರ್ ಹಾಗೂ ಅಧಿಕಾರಿಗಳು ಶನಿವಾರ ಪ್ರಾಥಮಿಕ ಹಂತದ ಪರಿಶೀಲನೆ ಸಭೆ ನಡೆಸಿದರು.
ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ‘‘ಅ.13ರಿಂದ 27ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಅ.13 ಮೊದಲ ದಿನ, ಅ.27 ಕೊನೆಯ ದಿನ ಹಾಗೂ ಅ.25 ರಂದು ಸೂರ್ಯ ಗ್ರಹಣದ ಪ್ರಯುಕ್ತ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ,’’ ಎಂದು ತಿಳಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಸೇರಿ ಎಲ್ಲಾ ಜನಪ್ರತಿನಿಧಿಗಳನ್ನು ಜಿಲ್ಲಾಡಳಿತದ ಪರವಾಗಿ ಆಹ್ವಾನಿಸಲಾಗುವುದು. ಹೊರ ರಾಜ್ಯದಿಂದಲೂ ಭಕ್ತಾಧಿಗಳು ಬರುವುದರಿಂದ ಅವರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ನೀಡಲು ಸನ್ನದ್ಧರಾಗಿದ್ದೇವೆ” ಎಂದು ಪ್ರೀತಂ ಜೆ. ಗೌಡ ಮಾಹಿತಿ ನೀಡಿದರು.