ಕೋರ್ಟ್ ತೀರ್ಪನ್ನು ವಿರೋಧಿಸಿ ಧರಣಿಗೆ ಕೂತ ವಿದ್ಯಾರ್ಥಿನಿಯರು – Saaksha Tv
ಹಾಸನ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ವಿವಾದಕ್ಕೆ ಮಂಗಳವಾರ ಹೈಕೋರ್ಟ್ ತೀರ್ಪು ನೀಡಿದ್ದು, ಆದರೆ ತೀರ್ಪಿನ ವಿರುದ್ಧ ಕೆಲವು ವಿದ್ಯಾರ್ಥಿನಿಯರು ಧರಣಿ ನಡೆಸುತ್ತಿದ್ದಾರೆ.
ಹಾಸನದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಅಲ್ಲದೆ ನಮ್ಮ ಅಭಿಪ್ರಾಯವನ್ನು ಕೋರ್ಟ್ ಕೇಳಬೇಕಾಗಿತ್ತು. ನಮಗೆ ಅನ್ಯಾಯವಾಗಿದೆ. ನಮಗೆ ಶಿಕ್ಷಣ ಹಾಗೂ ಹಿಜಾಬ್ ಎರಡೂ ಬೇಕು. ಹಿಜಾಬ್ ಇಲ್ಲದೇ ಯಾವುದೇ ಕಾರಣಕ್ಕೂ ಕಾಲೇಜಿಗೆ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಳೆದೊಂದು ತಿಂಗಳಿನಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಗೆ ಹೋಗದೇ ಕಾಲೇಜು ಹೊರಗೆ ಕುಳಿತ್ತಿದ್ದು, ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು. ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಕಾಲೇಜಿಗೆ ಬರಲ್ಲ ಎಂದು ಹೇಳಿದ್ದಾರೆ