ಹಾಸನ : ಹಾಸನದಲ್ಲಿ ಕೊರೊನಾ ಹಾವಳಿ ಮುಂದುವರೆದಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ ಹೊಸದಾಗಿ 195 ಜನರಿಗೆ ಸೊಂಕು ತಗುಲಿರುವುದು ಪತ್ತೆಯಾಗಿದೆ. ಒಂದೇ ದಿನ 3 ಜನರು ಕೊರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 159ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5970ಕ್ಕೆ ಏರಿಕೆಯಾಗಿದೆ.
ಇನ್ನೂ ಈವರೆಗೂ 3946 ಮಂದಿ ಗುಣಮುಖರಾಗಿದ್ದು, 1865 ಸಕ್ರಿಯ ಕೇಸ್ ಗಳು ಜಿಲ್ಲೆಯಲ್ಲಿವೆ. ಇಂದು ಪತ್ತೆಯಾದ ಸೋಂಕಿತರ ಪೈಕಿ 17 ಜನರು ಅರಸೀಕೆರೆ ತಾಲ್ಲೂಕಿನವರಾಗಿದ್ದಾರೆ. ಇನ್ನು ಚನ್ನರಾಯಪಟ್ಟಣದಲ್ಲಿ 15, ಆಲೂರಿನಲ್ಲಿ 4, ಹಾಸನ ತಾಲ್ಲೂಕಿನಲ್ಲಿ 88, ಹೊಳೆನರಸೀಪುರದಲ್ಲಿ 21, ಅರಕಲಗೂಡಿನಲ್ಲಿ 15, ಬೇಲೂರಿನಲ್ಲಿ 26 ಹಾಗೂ ಸಕಲೇಶಪುರದಲ್ಲಿ 9 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.