ಪತ್ನಿ ಮಕ್ಕಳಿದ್ದ ಮನೆಗೆ ಬೆಂಕಿಯಿಟ್ಟ ಪಾಪಿ
ಹಾಸನದ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಘಟನೆ
ಮಕ್ಕಳನ್ನು ನೋಡಲು ಬಿಡದಕ್ಕೆ ಬೆಂಕಿ ಇಟ್ಟ ಪತಿ
ಜಿಲ್ಲಾಸ್ಪತ್ರೆಯಲ್ಲಿ ಪತ್ನಿ ,ಮಕ್ಕಳಿಗೆ ಚಿಕಿತ್ಸೆ ಪ್ರಾಣಾಪಾಯದಿಂದ ಪಾರು
ರಂಗಸ್ವಾಮಿ ಬೆಂಕಿ ಹಚ್ಚಿದ ಆರೋಪಿ
ಮಕ್ಕಳನ್ನ ನೋಡಲು ಬಿಡದ ಕಾರಣಕ್ಕೆ ಅವರಿದ್ದ ಮನೆಗೆ ಬೆಂಕಿ ಹಚ್ಚಿ ಪಾಪಿ ತಂದೆಯೊಬ್ಬ ಕ್ರೌರ್ಯ ಮೆರೆದಿರುವಂತಹ ಘಟನೆ ಹಾಸನದಲ್ಲಿ ನಡೆದಿದೆ..
ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ.. ಬೆಂಕಿ ಅನಾಹುತದಲ್ಲಿ ಮನೆಯಲ್ಲಿದ್ದ ಪತ್ನಿ ಹಾಗೂ ಇಬ್ಬರು ಬಮಕ್ಕಳು ಗಾಯಗೊಂಡಿದ್ದು , ಅವರನ್ನ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ..
ಗೀತಾ , 7 ವರ್ಷದ ಮಗು ಚಿರಂತನ್ , 5 ವರ್ಷದ ನಂದನ್ ಗಾಯಾಳುಗಳು.. ರಂಗಸ್ವಾಮಿ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಯಾಗಿದ್ದಾನೆ..
ಜಮೀನು ವಿಚಾರಕ್ಕೆ ರಂಗಸ್ವಾಮಿ ಹಾಗೂ ಗೀತಾ ನಡುವೆ ಜಗಳವಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 4 ತಿಂಗಳಿಂದ ಪತಿಯಿಂದ ಪತ್ನಿ , ಮಕ್ಕಳು ಪ್ರತ್ಯೇಕವಾಗಿದ್ದರು.
ಆಗಾಗ ರಂಗಸ್ವಾಮಿ ಬಂದು ಮಕ್ಕಳನ್ನ ನೋಡಿಕೊಂಡು ಮಾತನಾಡಿಸಿಕೊಂಡು ಹೋಗ್ತಿದ್ದ.. ಆದ್ರೆ ಇತ್ತೀಚೆಗೆ ಮಕ್ಕಳನ್ನ ನೋಡಲು ಪತ್ನಿ ಗೀತಾ ಬಿಟ್ಟಿಲ್ಲ.. ಹೀಗಾಗಿಯೇ ಸಿಟ್ಟಲ್ಲಿ ಪೆಟ್ರೋಲ್ ತಂದು ಮಧ್ಯರಾತ್ರಿ ಮನೆಗೆ ಸುರಿದು ಬೆಂಕಿ ಹಚ್ಚಿದ್ದಾನೆ.
ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಸ್ಥಳೀಯರ ನೆರವಿನಿಂದ ಗೀತಾ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ..
Hassan, man set fire to house in wich there were childrens and wife








