Hassan : ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ – ನಾಲ್ವರ ಬಂಧನ…
ಹಾಸನದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣ ಸಂಬಂಧ ಇದೀಗ ನಾಲ್ವರನ್ನ ಬಂಧಿಸಲಾಗಿದೆ. ಸಕಲೆಶಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವಾಗಿತ್ತು. ಆಕೆ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು..
ಘಟನೆಗೆ ಸಂಬಂಧಿಸಿ ಕಾಫಿ ತೋಟದ ಮಾಲೀಕ ಸುದರ್ಶನ್, ಸ್ವಾಗತ್, ಪಾಪಣ್ಣ ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಕಿರಾತಕರಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ.
ಬಾಲಕಿ ಕಾಫಿ ತೋಟದಲ್ಲಿ ಪೋಷಕರೊಂದಿಗೆ ನೆಲೆಸಿದ್ದಳು. ಕೂಲಿ ಕಾರ್ಮಿಕರಾಗಿದ್ದ ತಂದೆ ತಾಯಿ ಜೊತೆಗೆ ತೋಟದ ಲೈನ್ ಮನೆಯಲ್ಲಿ ಬಾಲಕಿ ವಾಸವಾಗಿದ್ದಳು.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಾಲ್ವರ ವಿರುದ್ಧವೂ ಪೋಕ್ಸೋ ಸೇರಿ ವಿವಿಧ ಕಾನೂನಿನಡಿ ಕೇಸ್ ದಾಖಲಾಗಿದೆ. ಸಂತ್ರಸ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ ಆಶ್ರಯದಲ್ಲಿದ್ದಾಳೆ.
Hassan: Minor girl rape case – four arrested…