ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 154 ಜನರಿಗೆ ಸೋಂಕು ತಗುಲಿದ್ದು, ಕಿಲ್ಲರ್ ಕೊರೊನಾಗೆ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೂ ಸೋಂಕಿಗೆ ಮೃತಪಟ್ಟವರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಇನ್ನೂ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4426ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ ಮೂವರು ಅರಸೀಕೆರೆಯವರಾಗಿದ್ದರೆ ಮತ್ತೊಬ್ಬರು ಹೊಳೆನರಸೀಪುರದವರು ಎನ್ನಲಾಗಿದೆ. 86 ವರ್ಷದ ವೃದ್ಧ, 48 ವರ್ಷದ ವ್ಯಕ್ತಿ, 70 ವರ್ಷದ ವೃದ್ಧ ಮಹಿಳೆ ಹಾಗೂ 40 ಷರ್ಷದ ಮತ್ತೋರ್ವರು ಮೃತಪಟ್ಟಿದ್ದಾರೆ. ಇನ್ನೂ ಗುಣಮುಖರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ಈವರೆಗೆ 2453 ಮಂದಿ ಗುಣಮುಖರಾಗಿದ್ದಾರೆ. 1849 ಕೇಸ್ ಗಳಿವೆ.
ಹೊಸ ದಾಖಲೆ: ರಾಮ ಮಂದಿರವು ತಾಜ್ ಮಹಲ್ನ್ನು ಹಿಂದಿಕ್ಕಿ ನಂಬರ್ 1 ಪ್ರವಾಸಿ ತಾಣ !
ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಂದು ಹೊಸ ಬೆಳವಣಿಗೆ ಸಂಭವಿಸಿದೆ. ದೇಶದ ಅತಿ ಹೆಚ್ಚು ಭೇಟಿ ನೀಡುವ ಸ್ಥಳಗಳ ಪಟ್ಟಿಯಲ್ಲಿ ಶತಮಾನಗಳಿಂದ ಮೊದಲ ಸ್ಥಾನದಲ್ಲಿದ್ದ ತಾಜ್ ಮಹಲ್ನ್ನು ಹಿಂದಿಕ್ಕಿ...