ಬೆಂಗಳೂರು: ಮೂರು ವರ್ಷಗಳ ಹಿಂದಿನ ದ್ವೇಷಕ್ಕೆ ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ದೇವನಹಳ್ಳಿ ತಾಲೂಕಿನ ಬೋವಿಪಾಳ್ಯದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಬೋವಿಪಾಳ್ಯದ ಶ್ರೀನಿವಾಸ್932) ಕೊಲೆಯಾಗಿರುವ ಯುವಕ ಎನ್ನಲಾಗಿದೆ.
ಶ್ರೀನಿವಾಸ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಗೋವಿಂದ್ ಮತ್ತು ಶ್ರೀನಿವಾಸ್ ಮಧ್ಯೆ 3 ವರ್ಷಗಳಿಂದ ಗ್ಯಾಂಗ್ ವಾರ್ ನಡೆಯುತ್ತಿತ್ತು. ಗ್ರಾಮದಲ್ಲಿ ಹೆಸರು ಮಾಡಬೇಕು ಎಂಬ ಉದ್ದೇಶದಿಂದ ಗೋವಿಂದ್ ಗುಂಪು ಕಟ್ಟಿಕೊಂಡಿದ್ದ. ಗಣೇಶ ಹಬ್ಬದ ವೇಳೆ ಗೋವಿಂದ್ ಮತ್ತು ಶ್ರೀನಿವಾಸ್ ನಡುವೆ ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಮೂರು ವರ್ಷಗಳಿಂದ ದ್ವೇಷವಿತ್ತು. ಆದರೆ, ಗೋವಿಂದ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಬೋವಿಪಾಳ್ಯ ಹೊರವಲಯದ ಎಂಬಾಸಿ ಕಂಪನಿ ಜಾಗದಲ್ಲಿ ಚಾಕು, ಮಚ್ಚಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.