ಕೋವಿಡ್ ಬಿಕ್ಕಟ್ಟಿನಿಂದಾಗಿ ಕನ್ನಡಚಿತ್ರಂಗ ಸಂಪೂರ್ಣ ಸ್ಥಬ್ಧವಾಗಿತ್ತು. ಇದೀಗ ಸರ್ಕಾರದಿಂದ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಸುದೀಪ್ ಅಭಿನಯದ ಪ್ಯಾಂಟಮ್ ಚಿತ್ರದ ಚಿತ್ರೀಕರಣವೂ ಹೈದ್ರಾಬಾದ್ ನಲ್ಲಿ ನಡೆಯುತ್ತಿದೆ. ಅದರಂತೆ ಇತ್ತೀಚೆಗಷ್ಟೇ ನಟ ರಾಕಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ -2 ನ ಶೂಟಿಂಗ್ ಇದೇ ತಿಂಗಳ ಅಂತ್ಯದಲ್ಲಿ ಪುನಾರಾಂಭ ಮಾಡುವುದಾಗಿ ನಿದೇಶಕ ಪ್ರಶಾಂತ್ ನೀಲ್ ಅವರು ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರು. ಅಲ್ಲದೇ ಮದಗಜದ ಚಿತ್ರಂಡವೂ ಮತ್ತೆ ಚಿತ್ರೀಕರಣದ ತಯಾರಿ ನಡೆಸಿಕೊಂಡಿದೆ. ಇದೀಗ ಸ್ಯಾಂಡಲ್ ವುಡ್ ನಾಯಕತ್ವವನ್ನು ತಮ್ಮ ಹೆಗಲಿಗೆ ಹೊತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಹ ತಮ್ಮ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಶಿವಣ್ಣ ಅವರ ಬಹುನಿರೀಕ್ಷಿತ ಚಿತ್ರ ‘ಭಜರಂಗಿ 2’ ಚಿತ್ರೀಕರಣ ಮತ್ತೆ ಶುರುವಾಗಲಿದೆ. ಎ. ಹರ್ಷ ಅವರು ಆಕ್ಷನ್ ಕಟ್ ಹೇಳಿರುವ ‘ಭಜರಂಗಿ 2’ನ ಶೂಟಿಂಗ್ ಇದೇ ಆಗಸ್ಟ್ 10ರ ಬಳಿಕ ಪುನರಾರಂಭವಾಗಲಿದೆ. ಮೋಹನ್ ಬಿ ಕೆರೆ ಅವರ ಸ್ಟುಡಿಯೋದಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಬೃಹತ್ ಸೆಟ್ ಹಾಕಿಸಲಾಗಿದೆ. ಭಜರಂಗಿ 2 ಚಿತ್ರದ ಚಿತ್ರೀಕರಣ ಅಂತಿಮ ಘಟ್ಟದಲ್ಲಿದ್ದು, ಇನ್ನು ಸುಮಾರು 12 ದಿನಗಳ ಚಿತ್ರೀಕರಣ ಬಾಕಿ ಇದೆ. ಅದರಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಈ ಸ್ಟುಡಿಯೋದಲ್ಲಿ ನಡೆಯಲಿದೆ. ಶಿವರಾಜ್ ಕುಮಾರ್ ಅವರ ಪಾತ್ರಕ್ಕೆ ಆರು ದಿನಗಳ ಚಿತ್ರೀಕರಣ ನಡೆಯುವುದು ಬಾಕಿಯಿದೆ.